ಉಳ್ಳಾಲ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ: ಶ್ರೀ ವಿದ್ಯಾಂಜನೇಯ ತಂಡಕ್ಕೆ ಪ್ರಶಸ್ತಿ

Update: 2024-11-12 17:37 GMT

ಮಂಗಳೂರು: ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೊಶಿಯೇಶನ್, ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೊಶಿಯೇಶನ್ ಸಹಯೋಗದೊಂದಿಗೆ ಉಳ್ಳಾಲದ ಮಹಾತ್ಮ ಗಾಂಧಿ ಮೈದಾನ ದಲ್ಲಿ ಇತ್ತೀಚೆಗೆ ಜರಗಿದ ತಾಲೂಕು ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಸ್ಥಳೀಯ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲಾ ತಂಡ ಪ್ರಥಮ ಸ್ಥಾನ ಪಡೆದಿದೆ.

ಈ ತಂಡ ದೇವಿಪುರ ದುರ್ಗಾ ಪರಮೇಶ್ವರಿ ತಂಡವನ್ನು ಅಂತಿಮ ಪಂದ್ಯದಲ್ಲಿ ಸೋಲಿಸುವ ಮೂಲಕ ಟ್ರೋಫಿ ಸಹಿತ ರೂ.15000 ನಗದನ್ನು ತನ್ನದಾಗಿಸಿಕೊಂಡು ಗೆಲುವಿನ ನಗುಬೀರಿತು.

ತೃತೀಯ ಸ್ಥಾನವನ್ನು ತತ್ವಮಸಿ ತಂಡ ಬಗಂಬಿಲ ಹಾಗೂ ಚತುರ್ಥ ಸ್ಥಾನವನ್ನು ಫ್ರೆಂಡ್ಸ್ ದೇವೀನಗರ ಪಡೆದುಕೊಂಡವು. ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೊಶಿಯೇಶನ್ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಿಜೇತ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿ ಶುಭ ಹಾರೈಸಿದರು.

ಕಬಡ್ಡಿ ಅಸೊಶಿಯೇಶನ್ ಜಿಲ್ಲಾ ಉಪಾಧ್ಯಕ್ಷ ಕೆ.ಟಿ ಸುವರ್ಣ, ದೇರಳಕಟ್ಟೆಯ ಉದ್ಯಮಿ ಚಂದ್ರಹಾಸ ಶೆಟ್ಟಿ, ಅಮೆಚೂರು ಕಬಡ್ಡಿ ಅಸೊಸಿಯೇಶನ್ ಜಿಲ್ಲಾ ಗೌರವ ಸಲಹೆಗಾರ ರತನ್ ಕುಮಾರ್ ಶೆಟ್ಟಿ, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಮಾಡೂರಿನ ಶಿರ್ಡಿ ಸಾಯಿ ಮಂದಿರದ ಸ್ಥಾಪಕ ಸುರೇಶ್ ಕೆ.ಪಿ, ಉದ್ಯಮಿ ಹರೀಶ್ ಕಾಮತ್, ಶಿವಾಜಿ ಫ್ರೆಂಡ್ಸ್ ಸರ್ಕಲ್ ತೊಕ್ಕೊಟ್ಟು ಇದರ ಅಧ್ಯಕ್ಷ ಮಾಧವ ಗಟ್ಟಿ, ಅಮೆಚೂರು ಕಬಡ್ಡಿ ಅಸೊಶಿಯೇಶನ್ ತಾಲೂಕು ಕೋಶಾಧಿಕಾರಿ ರಘುರಾಮ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಜಿದ್ ಉಳ್ಳಾಲ, ಕಬಡ್ಡಿ ಅಸೊಶಿಯೇಶನ್ ನ ತಾಲೂಕು ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿ ಸೋಜಾ, ಹಿರಿಯ ಕಬಡ್ಡಿ ಆಟಗಾರ ಹರೀಶ್ ಕುಮಾರ್ ಬಸ್ತಿಪಡ್ಪು, ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಹಾಸ, ಪ್ರವೀಣ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News