ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಪ್ರಕಟನೆಗೆ ಬ್ಯಾರಿ ಕೃತಿಗಳ ಆಹ್ವಾನ

Update: 2024-11-21 15:16 GMT

ಮಂಗಳೂರು: ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಕೃತಿಗಳ ಪ್ರಕಟನೆಗೆ ಮುಂದಾಗಿದೆ.

ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಈವರೆಗೆ ಒಂದೇ ಒಂದು ಕೃತಿಯನ್ನು ಪ್ರಕಟಿಸದ ಲೇಖಕ, ಲೇಖಕಿಯರು ಬರೆದ ಯಾವುದೇ ಪ್ರಕಾರದ ಸಾಹಿತ್ಯ (ಕತೆ, ಕವನ, ಚುಟುಕು, ಹನಿಗವನ, ಕಾದಂಬರಿ...ಇತ್ಯಾದಿ)ಕೃತಿಗಳನ್ನು ಪ್ರಕಟನೆಗೆ ಆಯ್ಕೆ ಮಾಡಲಾಗುವುದು.

ಅಕಾಡೆಮಿಯ ಪುಸ್ತಕ ಪ್ರಕಟಣೆ ಪರಿಶೀಲನಾ ಸಮಿತಿಯು ಕೃತಿಗಳನ್ನು ಪರಿಶೀಲಿಸಲಿದ್ದು, ಪ್ರಕಟಣೆಗೆ ಸಂಬಂಧಿಸಿದ ಅಂತಿಮ ತೀರ್ಮಾನವು ಅಕಾಡೆಮಿಯದ್ದಾಗಿದೆ.

ಆಸಕ್ತರು ಡಿಸೆಂಬರ್ 31, 2024ರೊಳಗೆ ಕೃತಿಗಳನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, 2ನೇ ಮಹಡಿ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0824-2412297 ಅಥವಾ ಮೊಬೈಲ್ ಸಂಖ್ಯೆ:7483946578ಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News