ಚತುಷ್ಪಥ ರಸ್ತೆ ಕಾಮಗಾರಿಗೆ ಸ್ಪೀಕರ್ ಯು.ಟಿ. ಖಾದರ್ ಶಿಲಾನ್ಯಾಸ
ಉಳ್ಳಾಲ: ಓಟಿಗಾಗಿ ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಭವಿಷ್ಯದ ತಲೆಮಾರಿಗೆ ಪೂರಕವಾದ ಕಾಮಗಾರಿ ಗಳನ್ನು ಅನುಷ್ಟಾನಗೊಳಿಸುವುದು ನನ್ನ ಜವಬ್ದಾರಿಯಾಗಿದೆ.ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟಿನಿಂದ-ಚೆಂಬುಗುಡ್ಡೆವರೆಗೆ ಹಾಗೂ ಅಸೈಗೋಳಿಯಿಂದ-ನಡುಪದವು ತನಕ ನಿರ್ಮಾಣ ಆಗಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ತೊಕ್ಕೊಟ್ಟಿನ ಹೃದಯ ಭಾಗದಲ್ಲಿ ಶಂಕು ಸ್ಥಾಪನೆಗೈದು ಅವರು ಮಾತನಾಡಿದರು.
ತೊಕ್ಕೊಟ್ಟುವಿನಿಂದ- ಮುಡಿಪು ಸಂಪರ್ಕದ ಚತುಷ್ಫಥ ರಸ್ತೆ ಕಾಮಗಾರಿಯನ್ನ ತನ್ನ ಶಾಸಕ ನಿಧಿಯಿಂದಲೇ ಹಂತ ಹಂತ ವಾಗಿ ನಡೆಸಲಾಗುತ್ತಿದೆ.ಇಷ್ಟು ವರ್ಷ ಯಾವುದೇ ವ್ಯಾಪಾರಿಗಳಿಗೆ ತೊಂದರೆ ನೀಡಿಲ್ಲ.ಅಂಗಡಿ,ಮಳಿಗೆಗಳ ಎದುರು ಶೀಟ್ ಎಷ್ಟು ಮುಂದಕ್ಕೆ ಹಾಕಿದರೂ ಅಡ್ಡಿಪಡಿಸಿಲ್ಲ. ಆದರೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ವ್ಯಾಪಾರಿಗಳ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಉಳ್ಳಾಲವನ್ನು ಸ್ಮಾರ್ಟ್ ಮಾಡುವ ನಿಟ್ಟಿನಲ್ಲಿ ವಿದ್ಯುತ್ ತಂತಿಗಳನ್ನು ಮಣ್ಣಿನಡಿ ಹಾಕುವ ವ್ಯವಸ್ಥೆಗೆ 220 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. 24 ಗಂಟೆ ಕುಡಿಯುವ ನೀರು, ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾ ಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 80ರಿಂದ 100 ಕೋಟಿ ಅನುದಾನ ಬಿಡುಗಡೆ ಮಾಡಲಾ ಗಿದೆ ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ಮುಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ನಗರ ಸಭೆಯ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನ ಹರೀಶ್, ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ,ನಗರಸಭಾ ಸದಸ್ಯ ಬಾಝಿಲ್ ಡಿಸೋಜ, ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಕೆ.ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮನ್ಸೂರ್ ಉಳ್ಳಾಲ, ನಾಸೀರ್ ಅಹ್ಮದ್ ಸಾಮಣಿಗೆ, ಉಳ್ಳಾಲ ದರ್ಗಾದ ಮಾಜಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅಮರನಾಥ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.