ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು

Update: 2024-11-28 15:15 GMT

ಮಂಗಳೂರು: ನಗರದ ಹಂಪನಕಟ್ಟೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗುಂಡ್ಲು ಪೇಟೆಯ ನಿವಾಸಿ ಮಹಾದೇವ ಸ್ವಾಮಿ ಎಂಬವರು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಕರಿಯಲ್ಲಿ ಮ್ಯಾನೇಜರ್ ಆಗಿದ್ದ ರೋಹಿತ್ ಪೂಜಾರಿ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದು, ಈ ವೇಳೆ ಬೇಕರಿಯ ಹಣದ ವಹಿವಾಟವನ್ನು ಮಹಾದೇವ ಸ್ವಾಮಿ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ನ.26ರಂದು ದಿನದ ವ್ಯವಹಾ ರದ ಹಣವನ್ನು ಮಹಾದೇವ ಸ್ವಾಮಿ ಬ್ಯಾಂಕ್‌ಗೆ ಜಮೆ ಮಾಡಿಲ್ಲ. ರಾತ್ರಿ ರೂಮಿಗೆ ತೆರಳಿದ್ದ ಆತ ಮರುದಿನ ಬೆಳಗ್ಗೆ ಸವಹರ್ತಿಗಳು ನೋಡಿದಾಗ ರೂಮಿನಿಂದ ನಾಪತ್ತೆಯಾಗಿದ್ದ. ಮೊಬೈಲ್ ಕೂಡಾ ಬಿಟ್ಟು ಹೋಗಿದ್ದ ಎಂದು ತಿಳಿದು ಬಂದಿದೆ.

‘ನನ್ನನ್ನು ಹುಡುಕಬೇಡಿ, ನಾನು ಸಿಗುವುದಿಲ್ಲ, ಪ್ಲೀಸ್ ನನ್ನನ್ನು ಕ್ಷಮಿಸಿ, ಬದುಕಲು ಅರ್ಹನಲ್ಲ, ಸಾರಿ... ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್‌ನೋಟ್ ಬರೆದಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News