ಸಂತ ಅಲೋಶಿಯಸ್ ಪರಿಗಣಿತ ವಿವಿ: ಅಂತರ್‌ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

Update: 2025-01-15 15:14 GMT

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಹ್ಯುಮಾನಿಟೀಸ್ ಆಶ್ರಯದಲ್ಲಿ ‘ಸುಸ್ಥಿರ ಅಭಿವೃದ್ಧಿ ಗುರಿಗಳು: ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳ ಸಂಗಮ’ ಎಂಬ ವಿಷಯ ದಲ್ಲಿ ಮೂರು ದಿನಗಳ ಅಂತರ್‌ರಾಷ್ಟ್ರೀಯ ಸಮ್ಮೇಳನ ಇಂದು ಆರಂಭಗೊಂಡಿತು.

ಸಮ್ಮೇಳನದಲ್ಲಿ ಜಪಾನ್‌ನ ಸೀಸೆನ್ ವಿವಿಯ ಪ್ರೊ. ಕೇಟಿ ಮಾಟ್ಸುಯಿ ಮುಖ್ಯ ಭಾಷಣ ಮಾಡಿದರು.

ಥಿಂಕ್ ಲೀಪ್ ಟೆಕ್ನಾಲಜಿ ಲ್ಯಾಬ್ಸ್ ಪ್ರೈ. ಲಿ.ನ. ಸ್ಥಾಪಕ ಮತ್ತು ಸಿಇಒ ವಿಘ್ನೇಶ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ವಿಶೇಷವಾಗಿ ತಾಂತ್ರಿಕ ವಲಯಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ತಮ್ಮ ಪ್ರಮುಖ ಗಮನವನ್ನು ಕೇಂದ್ರೀಕರಿಸಿ ಮಾತನಾಡಿದರು.

ಬೆಂಗಳೂರಿನ ಸೆಂಟರ್ ಫಾರ್ ಕಮ್ಯುನಿಟಿ ಡೈಲಾಗ್ ಚೇಂಜ್‌ನ ಸಹ-ಸಂಸ್ಥಾಪಕ ರವಿ ರಾಮಸ್ವಾಮಿ , ಸಂಸ್ಥೆಯ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್‌ಜೆ ಮಾತನಾಡಿದರು.

ಪ್ರೊ ಚಾನ್ಸೆಲರ್ ಫ್ರಾಂಕ್ ಮೆಲ್ವಿನ್ ಪಿಂಟೊ ಎಸ್‌ಜೆ ಅಧ್ಯಕ್ಷತೆ ವಹಿಸಿದ್ದರು. ಸುಸ್ಥಿರ ಅಭಿವೃದ್ಧಿ ಪ್ರಪಂಚದಾದ್ಯಂತ ನಡೆಯ ಬೇಕು, ಪ್ರತಿಯೊಬ್ಬರೂ ಪಾತ್ರ ವಹಿಸಬೇಕು ಎಂದು ಹೇಳಿದರು.

ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಹ್ಯುಮಾನಿಟೀಸ್‌ನ ಡೀನ್ ಡಾ. ರೋಸ್ ವೀರಾ ಡಿ ಸೋಜ ಸ್ವಾಗತಿಸಿದರು. ಸಂಚಾಲಕಿ ಡಾ. ಶಾಲಿನಿ ಅಯ್ಯಪ್ಪ ಅತಿಥಿಗಳನ್ನು ಪರಿಚಯಿಸಿದರು. ಡಾ. ಪೃಥ್ವಿ ವಂದಿಸಿದರು. ಮಿಚೆಲ್ನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News