ಕೂಡಿಟ್ಟ ಹಣದ ಡಬ್ಬವನ್ನೇ ಸಮಸ್ತ ಸಹಾಯ ಹಸ್ತ ಫಂಡಿಗೆ ಹಸ್ತಾಂತರಿಸಿದ ಶಾಹಿಲ್

Update: 2025-01-15 13:32 GMT

ಬೆಳ್ತಂಗಡಿ : ತಾಲೂಕಿನ ಬಂಗೇರಕಟ್ಟೆ ಮದ್ರಸದ ಹಳೇ ವಿದ್ಯಾರ್ಥಿ ಮುಹಮ್ಮದ್ ಶಾಹಿಲ್ ಬಂಗೇರಕಟ್ಟೆ ಅವರು ತನ್ನ ತಂದೆ ತಾಯಿ ನೀಡಿದಂತಹ ಹಣವನ್ನು ಡಬ್ಬದಲ್ಲಿ ಹಾಕಿ ಅದನ್ನು ತಾನು ಕಲಿತ ಬಂಗೇರಕಟ್ಟೆ ಮದ್ರಸ ಸದರ್ ಉಸ್ತಾದರ ಮೂಲಕ 3ನೇ ಬಾರಿಗೆ ʼಬಹು ಸಮಸ್ತ ಸಹಾಯ ಹಸ್ತ ಫಂಡಿಗೆ ಹಸ್ತಾಂತರಿಸಿʼ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ

ಕಳೆದೆರಡು ವರ್ಷವೂ ಇದೇ ರೀತಿ ಈ ವಿದ್ಯಾರ್ಥಿ ತಾನು ಕೂಡಿಟ್ಟ ಹಣವನ್ನು ಸಮಸ್ತ ಸಹಾಯ ಹಸ್ತ ಫಂಡಿಗೆ ಹಸ್ತಾಂತರಿಸಿ ತಾನೊಂದು ಹಾಫಿಳ್ ಆಗಬೇಕು ಎಂದು ಆಸೆಪಟ್ಟಿದ್ದರು.

ಇದೀಗ ಆ ಆಸೆ ಸಾಫಲ್ಯ ಎಂಬಂತೆ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕೆಐಸಿ ಕುಂಬ್ರದಲ್ಲಿ ಹಾಫಿಳ್ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡು ಎರಡು ಜುಝ್ಹ್ ಪೂರ್ತಿಯಾಗಿ ಕಂಠಪಾಠ ಮಾಡಿಕೊಂಡು ಹಾಫಿಳ್ ವಿದ್ಯಾರ್ಥಿಯಾಗಿ ಮುಂದುವರಿಯುತ್ತಿದ್ದಾರೆ.

ಈ ಒಂದು ಪುಣ್ಯ ಕಾರ್ಯ ನಡೆಸಲು ಈ ವಿದ್ಯಾರ್ಥಿ ಗೆ ಪ್ರೋತ್ಸಾಹ ಸಹಕರಾ ನೀಡಿದ್ದು ಅವರ ತಂದೆ ಸಮಸ್ತದ ಸಕ್ರಿಯ ಕಾರ್ಯಕರ್ತ SKSSF ದ.ಕ ಈಸ್ಟ್ ಜಿಲ್ಲಾ ವಿಖಾಯ ಕನ್ವೀನರ್ ಖಾದರ್ ಬಂಗೇರಕಟ್ಟೆ ಅವರು.

ವಿದ್ಯಾರ್ಥಿಯ ಈ ಕಾರ್ಯಕ್ಕೆ SKSBV ನೂರುಲ್ ಹುದಾ ಮದ್ರಸ ಬಂಗೇರಕಟ್ಟೆ ಕಮೀಟಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News