ಉಳ್ಳಾಲ ಉರೂಸ್‌ಗೆ ಸಿಎಂ ಸಿದ್ದರಾಮಯ್ಯರಿಗೆ ಆಹ್ವಾನ
Update: 2025-04-05 21:49 IST

ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್ ಪ್ರಯುಕ್ತ ಸಿಎಂ ಸಿದ್ದರಾಮಯ್ಯರನ್ನು ಉಳ್ಳಾಲ ದರ್ಗಾ ಸಮಿತಿ ನಿಯೋಗವು ಸಿಎಂ ಕಚೇರಿಯಲ್ಲಿ ಭೇಟಿ ಮಾಡಿ ಉರೂಸ್ ಸಮಾರಂಭಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭ ಮೇ 16ರಂದು ಉಳ್ಳಾಲ ಉರೂಸಿಗೆ ಭಾಗವಹಿಸುವುದಾಗಿ ಸಿ.ಎಂ ತಿಳಿಸಿದರು.
ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಉಪಸ್ಥಿತರಿದ್ದರು.
ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ರವರ 22ನೇ ಪಂಚವಾರ್ಷಿಕ 432ನೇ ವಾರ್ಷಿಕ ಉರೂಸ್ ಸಮಾರಂಭವು ಎಪ್ರಿಲ್ 24ರಿಂದ ಪ್ರಾರಂಭಗೊಂಡು ಮೇ 18 ರ ತನಕ ನಡೆಯಲಿದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ಉರೂಸ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.