ಆಧುನಿಕ ಶಿಕ್ಷಣವು ಹೆಚ್ಚು ಸಾಮರ್ಥ್ಯ ಆಧಾರಿತವಾಗಿದೆ: ಪ್ರೊ. ಪಿ.ಎಲ್.ಧರ್ಮ

Update: 2025-04-05 19:44 IST
ಆಧುನಿಕ ಶಿಕ್ಷಣವು ಹೆಚ್ಚು ಸಾಮರ್ಥ್ಯ ಆಧಾರಿತವಾಗಿದೆ: ಪ್ರೊ. ಪಿ.ಎಲ್.ಧರ್ಮ
  • whatsapp icon

ಮಂಗಳೂರು, ಎ.5: ಇಂದಿನ ಶಿಕ್ಷಣವು ಹೆಚ್ಚು ಸಾಮರ್ಥ್ಯ ಆಧಾರಿತವಾಗಿದೆ.ಹೊಸ ವೃತ್ತಿಪರರು ಹೆಚ್ಚು ಕೌಶಲ್ಯಪೂರ್ಣ, ಹೊಂದಿಕೊಳ್ಳುವ ಮತ್ತು ಸಂಪನ್ಮೂಲ ಹೊಂದಿರುವವರಾಗಬೇಕೆಂದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಹೇಳಿದ್ದಾರೆ.

ನಗರದ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆದ ಫಾದರ್ ಮುಲ್ಲರ್ ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್ , ಫಾದರ್ ಮುಲ್ಲರ್ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಇವುಗಳ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಜನರು ಆಸ್ಪತ್ರೆಗೆ ಬಂದಾಗ ಹುಡುಕುವುದು ಕೇವಲ ಚಿಕಿತ್ಸೆಯಲ್ಲ.ಬದಲಾಗಿ ದಾದಿಯರ ಸಹಾನು ಭೂತಿಯ ಸ್ಪರ್ಶ ಎಂದು ಹೇಳಿದ ಅವರು ವೈದ್ಯರಿಗಿಂತ ಹೆಚ್ಚು ಕಾಳಜಿಯಿಂದ ಅವರನ್ನು ನಿರಂತರವಾಗಿ ನೋಡಿಕೊಳ್ಳುವವರು ದಾದಿಯರು. ಅವರ ಸಮರ್ಪಣೆ ಮತ್ತು ದಯೆಯ ಮೂಲಕ ರೋಗಿಯ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತಾರೆ ಎಂದರು.

ಸ್ಪೀಚ್ ಥೆರಪಿಸ್ಟ್‌ಗಳು ಧ್ವನಿಗೆ ಧ್ವನಿಯನ್ನು ತರುತ್ತಾರೆ.ಅದಕ್ಕೆ ಜೀವ ತುಂಬುತ್ತಾರೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರಿನ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನಾ ಅವರು ದಾದಿಯರು ಎಂದರೆ ರೋಗಿಯೊಂದಿಗೆ ಬೇರೆಯವರಿಗಿಂತ ಹೆಚ್ಚು ಸಮಯ ನಿಲ್ಲುವವರು. ಅವರು ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಿಗೆ ಅವರ ಚೇತರಿಕೆಗೆ ನೆರವಾಗುತ್ತಾರೆ. ಅವರ ಬದುಕಿಗೆ ಹೊಸ ಚೈತನ್ಯವನ್ನು ತುಂಬುತ್ತಾರೆ ಎಂದರು.

ಸಮಾರಂಭದಲ್ಲಿ 243 ಪದವೀಧರರು ತಮ್ಮ ಪದವಿಗಳನ್ನು ಸ್ವೀಕರಿಸಿದರು.

ನರ್ಸಿಂಗ್ ಸ್ಕೂಲ್‌ನ 47 ಪದವೀಧರರನ್ನು, ನರ್ಸಿಂಗ್ ಕಾಲೇಜಿನ 141 ಪದವೀಧರರನ್ನು (ಬಿ.ಎಸ್ಸಿ., ಪೋಸ್ಟ್ ಬೇಸಿಕ್ ಬಿ.ಎಸ್ಸಿ. ಮತ್ತು ಎಂ.ಎಸ್ಸಿ. ಸೇರಿದಂತೆ) ಮತ್ತು ವಾಕ್ ಮತ್ತು ಶ್ರವಣ ಕಾಲೇಜಿನ 55 ಪದವೀಧರರನ್ನು ಗೌರವಿಸಲಾಯಿತು.

ಫಾದರ್ ಮುಲ್ಲರ್ ಸ್ಕೂಲ್ ಆಫ್ ನರ್ಸಿಂಗ್‌ನ ರಿಯಾ ಜೊವಿತಾ ಡಾಲ್ಮೇಡಾ ಆನೇಕ ಪ್ರಶಸ್ತಿಗಳನ್ನು ಪಡೆದರು. ಅಕೃತಿ ಕುಂಚಾರಿಯಾ ಎ, ಲಾನ್‌ವಿನ್ ಶಾನ್ ಸುಜಲ್ ಕಾರ್ಡೊಝ್, ಪ್ರಿಯಾ ಅಸ್ಮಿ ಡಿ ಸೋಜ ಲಾನ್ಸನ್ ಶಾರೊನ್ ಡಿ ಸೋಜ, ನಂದನ್ ಎಂ ಮತ್ತು ಲೋಬೊ ರಿಯೊನಾ ರಾಬರ್ಟ್ ಇವರನ್ನು ಶ್ರೇಷ್ಠ ಶೈಕ್ಷಣಿಕ ಸಾಧನೆಗಾಗಿ ಗೌರವಿಸಲಾಯಿತು.

ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಗ್ಲೆನಿಶಾ ಫೆರ್ನಾಂಡಿಸ್ ಮತ್ತು ಕ್ಲೆರಿಟಾ ಜಾಯ್ಲೆನ್ ಲೋಬೊ ಅವರು ಕ್ರಮವಾಗಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ನರ್ಸಿಂಗ್‌ನಲ್ಲಿ ಶೈಕ್ಷಣಿಕ ಶ್ರೇಷ್ಠ ಸಾಧನೆಗಾಗಿ ಉನ್ನತ ಪ್ರಶಸ್ತಿ ಪುರಸ್ಕೃತರಾದರು.

ಪದವಿ ಕಾಳೇಜಿನ ವಿದ್ಯಾರ್ಥಿಗಳಾದ ನೈನಿಕಾ ಥಾಮಸ್ ಕ್ಯಾರೊಲ್ ಜೆವಿತಾ ಲೋಬೊ, ಜೆನಿನ್ ಡಿ ಸೋಜ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಾದ ಹ್ಯಾಡ್ಲೈನ್ ರೆಚೆಲ್ ನೊರೊನ್ಹಾ, ನೇಹಾ ಆರ್ ಪಾಟೀಲ್ ಕುಲಕರ್ಣಿ ಅವರನ್ನು ಯುಜಿ ವಿಭಾಗದ ಶೈಕ್ಷಣಿಕ ಶ್ರೇಷ್ಠ ಸಾಧನೆಗಾಗಿ ಹರ್ಲಿನ್ ಮೆರಿಲ್ ಮೆಂಡೋನ್ಸಾ, ಪಿಜಿ ವಿಭಾಗದ ಎ. ಶಿವಾನಿ, ನಿಖಿಲ್ ಪಿ ಎಸ್, ರೇಶ್ಮಿ ಸಂಜೀವ್ ಜೆ, ಎಲ್ನಾ ಅನಿಲ್, ಅಪರ್ಣಾ ಕೃಷ್ಣ ವಿ ವಿ ಇವರನ್ನು ಗೌರವಿಸಲಾಯಿತು.

ಅತ್ಯುತ್ತಮ ಅಧ್ಯಯನ ವರದಿ ಮಂಡಿಸಿದ ನಿಖಿಲ್ ಪಿ ಎಸ್( ಎಂ.ಎಸ್ಸಿ. ಶ್ರವಣಶಾಸ್ತ್ರ) ಮಿಧುನ್ ಲಾಲ್ ಬಿ, (ಎಂ.ಎಸ್ಸಿ. ಸ್ಪೇಚ್ ಲ್ಯಾಂಗ್ವೆಜ್ ಪೆಥಾಲಾಜಿ )ಇವರಿಗೆ ಪ್ರಶಸ್ತಿ ನೀಡಲಾಯಿತು.

ಬಿ.ಎಸ್ಸಿ. ನರ್ಸಿಂಗ್‌ನಲ್ಲಿ ಸಮಗ್ರ ಸಾಧನೆಗಾಗಿ ಅಬೆಲ್ ಜೋಸೆಫ್ ಮತ್ತು ಜಿಎನ್‌ಎಂನಲ್ಲಿ ರೆನಿಟಾ ಡಿ ಸೋಜ ಪ್ರಶಸ್ತಿ ತನ್ನದಾಗಿಸಿಕೊಂಡರು.

ಬಿಎಎಸ್‌ಎಲ್‌ಪಿಯಲ್ಲಿ 2021-2025 ವರ್ಷದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿಯನ್ನು ರೋ ಶನಿ ಡಿ ಸಿಲ್ವಾ ಇವರಿಗೆ ನೀಡಲಾಯಿತು.

ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್‌ನ ವರದಿಯನ್ನು ಪ್ರಾಂಶುಪಾಲೆ ಪ್ರೊ. ಧನ್ಯಾ ದೇವಾಸಿಯಾ, ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಇದರ ಶೈಕ್ಷಣಿಕ ವರದಿಯನ್ನು ಪ್ರಾಂಶುಪಾಲೆ ಪ್ರೊ. ಸಿಂಥಿಯಾ ಸಾಂತ್‌ಮಯೋರ್ ಮಂಡಿಸಿದರು.

ಫಾದರ್ ಮುಲ್ಲರ್ ಸಂಸ್ಥೆಯ ನಿಯೋಜಿತ ನಿರ್ದೇಶಕ ವಂ ಫಾವುಸ್ತಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಜಾರ್ಜ್ ಜೀವನ್ ಸಿಕ್ವೇರಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಹೆಚ್ಚುವರಿ ಅಧೀಕ್ಷಕ ಡಾ.ಕಿರಣ್ ಶೆಟ್ಟಿ , ಚೀಪ್ ನರ್ಸಿಂಗ್ ಆಫೀಸರ್ ಸಿಸ್ಟರ್ ನ್ಯಾನ್ಸಿ ಮಥಾಯಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಉಪ ಪ್ರಾಂಶುಪಾಲ ಡಾ. ಆಗ್ನೆಸ್ ಇಜೆ ವಂದಿಸಿದರು.









 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News