ಎ.11ರಿಂದ 'ತುಂಬೆ ಫೆಸ್ಟ್ 2025' ಕಾರ್ಯಕ್ರಮ

ಬಂಟ್ವಾಳ : ತುಂಬೆ ಬಿ.ಎ ಗ್ರೂಪ್ ನ ಆಶ್ರಯದಲ್ಲಿ ಕರ್ನಾಟಕ ಸರಕಾರದ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಬಂಟ್ವಾಳ ತಾಲೂಕಿನ ತುಂಬೆ ಫಾದರ್ ಮುಲ್ಲರ್ ಅಸ್ಪತ್ರೆ ಬಳಿಯಲ್ಲಿರುವ ತುಂಬೆ ಮೈದಾನದಲ್ಲಿ 'ತುಂಬೆ ಫೆಸ್ಟ್ 2025' ವಿಶಿಷ್ಠ ಕಾರ್ಯಕ್ರಮವು ಎ.11,12,13 ರಂದು ನಡೆಯಲಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿದಿನ ಸಂಜೆ 4 ರಿಂದ 10 ಗಂಟೆಯವರೆಗೆ ತುಂಬೆ ಫೆಸ್ಟ್ ನಡೆಯಲಿದ್ದು ಎಲ್ಲರಿಗೂ ಉಚಿತಪ್ರವೇಶ ವಿರುತ್ತದೆ, ಬಿ.ಎಂ.ಅಶ್ರಫ್ ಅವರು ಕಾರ್ಯಕ್ರಮದ ಆಯೋಜಕರಾಗಿದ್ದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಡೆಯುವ ಈ ಫೆಸ್ಟ್ ಗೆ ಸರಕಾರದಿಂದ ಸಹಕಾರ ಮಾತ್ರ ಇರಲಿದೆ ಎಂದರು.
ಎ.11ರಂದು ಸಂಜೆ 4 ಗಂಟೆಗೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮೊಡಂಕಾಪು ಇನ್ಸೆಂಟ್ ಜೀಸಸ್ ಚರ್ಚ್ ನ ಧರ್ಮಗುರು ವೆಲೇರಿಯನ್ ಡಿ'ಸೋಜಾ, ಹಾಜಿ. ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ ಎಂದರು.
ಸಮಾಜದ ಎಲ್ಲಾ ಜನರನ್ನು ಒಗ್ಗೂಡಿಸಿ ಪರಸ್ಪರ ಗೌರವ, ಪ್ರೀತಿ, ಸೌಹಾರ್ದವನ್ನು ಬೆಳೆಸುವ ಹಾಗೂ ತುಂಬೆ ಮತ್ತು ಅಸುಪಾಸಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ತುಂಬೆ ಫೆಸ್ಟ್ ನ್ನು ಆಯೋಜಿಸಲಾಗಿದೆ, ತುಂಬೆ ಮತ್ತು ಅಸುಪಾಸಿನ ಗ್ರಾಮಗಳ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಈ ಪೆಸ್ಟ್ ಸಹಕಾರಿಯಾಗಲಿದೆ ಎಂದರು.
ಈ ಫೆಸ್ಟ್ ನಲ್ಲಿ ನಾಯಕರ ಸಮ್ಮಿಲನ, ಕುಟುಂಬ ಸಮ್ಮಿಲನ, ಯೇನೆಪೋಯ ವಿಶ್ವ ವಿದ್ಯಾನಿಲಯದಿಂದ ಆರೋಗ್ಯ ತಪಾಸಣಾ ಶಿಬಿರ, ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಉದ್ಯೋಗ ಮಾಹಿತಿ ಕಾರ್ಯ ಕ್ರಮ, ಆಹಾರ ಮೇಳ, ವಿವಿಧ ಉತ್ಪನ್ನಗಳ ಮಳಿಗೆಗಳನ್ನು ಹೊಂದಿದೆ ಎಂದವರು ವಿವರಿಸಿದರು.
ಇದೇ ವೇಳೆ ಫೆಸ್ಟ್ ನ ಮೂರು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬ್ಯಾರಿ ಮತ್ತು ತುಳು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು, ತೆಲಿಕೆದ ಗೊಂಚಿಲು, ಪಿಲಿ ನಲಿಕೆ, ಚೆಂಡೆ ವಾದನ, ಬಹುಭಾಷಾ ಕವಿಗೋಷ್ಠಿ, ಒಪ್ಪಣೆ, ದಫ್, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳು ನಡೆಯ ಲಿವೆ ಜೋಡಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ತುಂಬೆ ಐ.ಟಿ.ಐ ಸಂಸ್ಥೆಯ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್ ಅವರು ಮಾಹಿತಿ ನೀಡಿದರು.
ಎ.13 ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ ನಡೆಯಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ಬಾಲಿವುಡ್, ರಾಕ್ ಮ್ಯೂಸಿಕ್, ಉನ್ನತ ತಂತ್ರಜ್ಞಾನದ ಶಬ್ದ ಬೆಳಕು, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು , ಶಾಸಕರು ಮತ್ತು ಜನಪ್ರತಿನಿಧಿಗಳು, ಉದ್ಯಮಿಗಳು, ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ನಾಯಕ್, ದೈಹಿಕ ಶಿಕ್ಷಕ ಜಗದೀಶ್ ರೈ ಮತ್ತು ಸಫೀದ್ ಉಪಸ್ಥಿತರಿದ್ದರು.