ಹುರಿದ ಅಡಿಕೆಗಳ ಆಮದು ತಡೆಗೆ ಕೇಂದ್ರ ಸರಕಾರದ ಕ್ರಮ : ಕ್ಯಾಂಪ್ಕೊ ಶ್ಲಾಘನೆ

ಮಂಗಳೂರು: ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ)ದ ಐಟಿಸಿ (ಎಚ್‌ಎಸ್) ಕೋಡ್ 20081920 ಅಡಿಯಲ್ಲಿ ಪರಿಗಣಿತವಾಗಿದ್ದ ಹುರಿದ ಅಡಿಕೆಯ ಅನಿರ್ಬಂಧಿತ ವ್ಯಾಪಾರವನ್ನು ರದ್ದು ಗೊಳಿಸುವ ಮೂಲಕ ‘ರೋಸ್ಟೆಡ್ ನಟ್ಸ್ ಆ್ಯಂಡ್ ಸೀಡ್ಸ್’ ಹೆಸರಲ್ಲಿ ಆಮದಾಗುತ್ತಿದ್ದ ಅಡಿಕೆಗೆ ನಿರ್ಬಂಧ ಹೇರಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ.
ಎ.4ರಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯು ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಐಟಿಸಿ (ಎಚ್‌ಎಸ್) ಕೋಡ್ 08028090 ಮತ್ತು 20081920 ಅಡಿಯಲ್ಲಿ ಬರುವ ‘ಹುರಿದ ಅಡಿಕೆ’’ಯನ್ನು ‘ ಬರುವುದಕ್ಕೆ ನಿಷೇಧ ವಿಧಿಸಲಾಗಿದೆ. ಆದಾಗ್ಯೂ,ಕನಿಷ್ಠ ಆಮದು ದರವನ್ನು ಪ್ರತಿ ಕೆಜಿ ಗೆ ರೂ .351 ನಿಗದಿ ಪಡಿಸಿದ್ದು, ಆಮದು ಮಾಡಲ್ಪಡುವ ಅಡಿಕೆಯ ವೆಚ್ಚ, ವಿಮೆ ಮತ್ತು ಸರಕು ಸಾಗಣೆ ( ಸಿಐಎಫ್ ) ಮೌಲ್ಯವು ಪ್ರತಿ ಕಿಲೋಗ್ರಾಂಗೆ ರೂ. 351ಮತ್ತು ಅದಕ್ಕಿಂತ ಹೆಚ್ಚಿದ್ದರೆ, ಶೇ 100 ರಫ್ತು ಆಧಾರಿತ ಘಟಕಗಳು (ಇಔಗಳು), ಎಸ್‌ಇಝೆಡ್ ನಲ್ಲಿರುವ ಘಟಕಗಳು ಮತ್ತು ಮುಂಗಡ ಅಧಿಕಾರ ಯೋಜನೆಯಡಿಯಲ್ಲಿ ಆಮದು ಮಾಡಿಕೊಳ್ಳುವ ಅಡಿಕೆಗೆ ಎಂಐಎಫ್ ಷರತ್ತುಗಳು ಅನ್ವಯವಾಗುವುದಿಲ್ಲ. ಈ ಸಂಖ್ಯೆಯಡಿಯಲ್ಲಿ ಎಲ್ಲಾ ರೀತಿಯ ಸಂಸ್ಕರಿತ ಅಡಿಕೆಯನ್ನು ಸೇರಿಸಲಾಗಿದ್ದು, ಈಗ ಹುರಿದ ಅಡಿಕೆಯು ಸಹ ಸೇರ್ಪಡೆಗೊಂಡಿದೆ.
ಕೆಲವು ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಹರಿದು ಬಂದಿರುವ ಪರಿಣಾಮವಾಗಿ ಪಟೋರ ಮತ್ತಿತರ ಕೆಳದರ್ಜೆಯ ಅಡಿಕೆಯ ದರ ಕಡಿಮೆಯಾಗಿರುವು ದಲ್ಲದೇ ಬೇಡಿಕೆ ಕುಂಠಿತವಾಗಿದ್ದನ್ನು ಗಮನಿಸಬಹುದಾಗಿದೆ. ಕೇಂದ್ರ ಸರಕಾರದ ಕ್ರಮದಿಂದ ಬೆಳೆ ಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.