'ಮೀಫ್'ನಿಂದ ಸುಳ್ಯ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಿಗೆ ಸನ್ಮಾನ

ಮಂಗಳೂರು, ಮಾ.23: ರಾಜ್ಯ ಸರಕಾರದಿಂದ ಸುಳ್ಯ ಯೋಜನಾ ಪ್ರಾಧಿಕಾರ (ಸುಡಾ)ದ ನೂತನ ಅಧ್ಯಕ್ಷ ರಾಗಿ ನೇಮಕಗೊಂಡ ಮೀಫ್ ಉಪಾಧ್ಯಕ್ಷ ಕೆ.ಎಂ. ಮುಸ್ತಫ ಅವರನ್ನು ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಜೆಪ್ಪಿನಮೊಗರು ಯೇನೆಪೊಯ ಪಿಯು ಇಂಟರ್‌ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡಿ ಮೀಫ್ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದೆ. ಮುಸ್ತಫ ಮೀಫ್‌ನಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿ ಇಂದು ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು
ಕಣಚೂರು ಮೆಡಿಕಲ್ ಕಾಲೇಜಿನ ಸಲಹಾ ಕೌನ್ಸಿಲ್ ಚೇರ್‌ಮ್ಯಾನ್ ಡಾ. ಮುಹಮ್ಮದ್ ಇಸ್ಮಾಯಿಲ್ ಅವರು ಮುಸ್ತಫರನ್ನು ಸನ್ಮಾನಿಸಿ ಮಾತನಾಡಿದರು. ಯೇನೆಪೊಯ ಗ್ರೂಪ್ಸ್‌ನ ನಿರ್ದೇಶಕ ಜಾವೆದ್ ಯೇನೆಪೊಯ, ಯೇನೆಪೊಯ ಅಕಾಡಮಿಕ್ ಕೌನ್ಸಿಲ್ ಚೇರ್ ಮೆನ್ ಮಿಸ್ರಿಯ ಜಾವೆದ್ ಶುಭ ಹಾರೈಸಿದರು.
ಈ ಸಂದರ್ಭ ಮೀಫ್ ಪದಾಧಿಕಾರಿಗಳಾದ ರಿಯಾಝ್ ಕಣ್ಣೂರು, ಅನ್ವರ್ ಹುಸೈನ್, ಇಕ್ಬಾಲ್ ಕಾಟಿಪ್ಪಳ್ಳ, ಶಹಾಮ್ ಮೂಡುಬಿದಿರೆ, ಶಾರಿಕ್ ಕುಂಜತ್ತಬೈಲ್, ರಹ್ಮತುಲ್ಲ ಬುರೂಜ್ ಬಂಟ್ವಾಳ, ಅಬ್ದುರ‌್ರಹ್ಮಾನ್ ಹೀರಾ ಬಬ್ಬುಕಟ್ಟೆ, ಸಿರಾಜ್ ಮಣೆಗಾರ ಜೋಕಟ್ಟೆ, ಪರ್ವೀಜ್ ಅಲಿ, ಅಡ್ವೋಕೇಟ್ ಫಾರೂಕ್, ಕೆಪೆಕ್ ಮಾಜಿ ನಿರ್ದೇಶಕ ಪಿ.ಎ. ಮುಹಮ್ಮದ್, ಯೇನಪೊಯ ಶಿಕ್ಷಣ ಸಂಸ್ಥೆಗಳ ಮುಖ್ಯ ಸಲಹೆಗಾರ ಸಿನಾನ್ ಉಪಸ್ಥಿತರಿದ್ದರು.