ನ.10: ಮಂಗಳೂರು ಮ್ಯಾರಥಾನ್; ಸಂಚಾರ ಮಾರ್ಗದಲ್ಲಿ ಬದಲಾವಣೆ

Update: 2024-11-06 17:01 GMT

ಸಾಂದರ್ಭಿಕ ಚಿತ್ರ

ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನ.10ರಂದು ಮುಂಜಾವ 4ರಿಂದ ಬೆಳಗ್ಗೆ 10ರವರೆಗೆ ನಗರದಲ್ಲಿ ನಡೆಯುವ Niveus Mangaluru Marathon 2024 ಓಟದ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ 5000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ಓಟವು ನಗರದ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್), ಚಿಲಿಂಬಿ, ಉರ್ವಸ್ಟೋರ್, ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್, ಕೂಳೂರು, ಕೆಐಒಸಿಎಲ್ ಜಂಕ್ಷನ್ ಮೂಲಕ ಎನ್‌ಎಂಪಿಎ ಸರ್ವಿಸ್ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್‌ನಲ್ಲಿ ಪಣಂಬೂರು ಬೀಚ್ ರಸ್ತೆಗೆ ತಿರುಗಿ ವಾಪಸ್ ಡಿಕ್ಸಿ ಕ್ರಾಸ್, ಕೆಐಒಸಿಎಲ್ ಜಂಕ್ಷನ್‌ಗೆ ಬಂದು ತಣ್ಣೀರುಬಾವಿ ಬೀಚ್‌ವರೆಗೆ ಹೋಗಿ ವಾಪಸ್ ಕೊಟ್ಟಾರಚೌಕಿ, ಲೇಡಿಹಿಲ್ ಮುಖಾಂತರ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.

*ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧ ಮಾಡಿರುವ ಮಾರ್ಗಗಳ ವಿವರ

1.ಮಣ್ಣಗುಡ್ಡೆ ಕಡೆಯಿಂದ ನಾರಾಯಣಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

2.ಉರ್ವ ಮಾರ್ಕೆಟ್‌ನಿಂದ ನಾರಾಯಣಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

3.ಕೆ.ಎಸ್.ಆರ್.ಟಿ.ಸಿ.ಯಿಂದ ಲಾಲ್‌ಬಾಗ್ ಮೂಲಕ ನಾರಾಯಣ ಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.

4.ನಾರಾಯಣಗುರು ವೃತ್ತ (ಲೇಡಿಹಿಲ್)ದಿಂದ ಕೊಟ್ಟಾರ ಚೌಕಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

5. ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕ್ರಾಸ್ ಕಡೆಗೆ ಸಾಗುವ ಸರ್ವಿಸ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನ ಸಂಚಾರ ವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

6.ಕೋಡಿಕಲ್ ಕ್ರಾಸ್‌ನಿಂದ ಕೂಳೂರು ಹೊಸ ಸೇತುವೆವರೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

7.ತಣ್ಣೀರುಬಾವಿ ಬೀಚ್ ರಸ್ತೆಯವರೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

8.ಮ್ಯಾರಥಾನ್ ಸಾಗುವ ಮಾರ್ಗದಲ್ಲಿನ ಎಡ ಭಾಗದಲ್ಲಿರುವ ಎಲ್ಲಾ ಅಡ್ಡ ರಸ್ತೆಗಳಿಂದ ವಾಹನಗಳು ಮಾರಥಾನ್ ಓಟ ಸಾಗುವ ಮುಖ್ಯ ರಸ್ತೆಗೆ ಬರುವುದನ್ನು ನಿಷೇಧಿಸಿದೆ.

ವಾಹನ ಸಂಚಾರಕ್ಕೆ ಮಾಡಿರುವ ಬದಲಿ ಮಾರ್ಗಗಳ ವಿವರ

1.ಪಿ.ವಿ.ಎಸ್ ಕಡೆಯಿಂದ ನಾರಾಯಣಗುರು ವೃತ್ತ (ಲೇಡಿಹಿಲ್) ಕಡೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್ - ಕೆ.ಎಸ್.ಆರ್.ಟಿ.ಸಿ ಮೂಲಕ ಸಂಚರಿಸುವುದು.

2.ಕುದ್ರೋಳಿ ಮಣ್ಣಗುಡ್ಡೆ ಮತ್ತು ಉರ್ವಮಾರ್ಕೆಟ್‌ನಿಂದ ನಾರಾಯಣಗುರು ವೃತ್ತ (ಲೇಡಿಹಿಲ್)ದ ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡೆ-ಬಲ್ಲಾಳ್‌ಬಾಗ್/ನೆಹರೂ ಅವಿನ್ಯೂ ರಸ್ತೆ-ಲಾಲ್‌ಬಾಗ್-ಕೆ.ಎಸ್.ಆರ್.ಟಿ.ಸಿ ಮೂಲಕ ಸಂಚರಿಸುವುದು.

3. ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಕಾಪಿಕಾಡ್ ಕಡೆಯಿಂದ ಕುಂಟಿಕಾನ ಮುಖೇನ ಸಂಚರಿಸುವುದು.

4. ಕೆ.ಪಿ.ಟಿ/ ಕುಂಟಿಕಾನ ಕಡೆಯಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಕೋಡಿಕಲ್ ಕ್ರಾಸ್ ಫ್ಲೈ -ಓವರ್ ಬಳಿ ಬಲಕ್ಕೆ ತಿರುಗಿ ಕೂಳೂರು ಕೊಟ್ಟಾರ ಕ್ರಾಸ್ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಕೂಳೂರು ಹಳೇ ಸೇತುವೆ ಬಳಿಯ ಪ್ಲೈ- ಓವರ್‌ನ ಮುಕ್ತಾಯದಲ್ಲಿ ಎಡಕ್ಕೆ ತಿರುಗಿ ಕೂಳೂರು ಹೊಸ ಸೇತುವೆ ಮುಖೇನ ಕೆ.ಐ.ಒ.ಸಿ.ಎಲ್ ಮುಖಾಂತರ ಸಂಚರಿಸುವುದು.

5.ಕಾವೂರು-ಪಂಜಿಮೊಗರು ಕಡೆಯಿಂದ ಬರುವ ಎಲ್ಲಾ ವಾಹನಗಳು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸರ್ವೀಸ್ ರಸ್ತೆಯ ಮುಖಾಂತರ ಉಡುಪಿ ಕಡೆಗೆ ಸಂಚರಿಸುವುದು.

6. ಆಶೋಕ ನಗರ, ಶೇಡಿಗುರಿ, ದಂಬೇಲ್, ಸುಲ್ತಾನ್ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್, ಮಣ್ಣಗುಡ್ಡೆ ಮುಖಾಂತರ ಸಂಚರಿಸುವುದು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News