ಪ್ರೆಸ್ಟೀಜ್ ಇಂಟ‌ರ್‌ ನ್ಯಾಶನಲ್ ಸ್ಕೂಲ್ ಗೆ ʼಮಂಗಳೂರಿನ ಬೆಸ್ಟ್ ಕೋ-ಎಡ್ ಸ್ಕೂಲ್ʼ ಪ್ರಶಸ್ತಿ

Update: 2024-10-25 10:36 GMT

ಮಂಗಳೂರು: ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ "ಮಂಗಳೂರಿನ ಬೆಸ್ಟ್ ಕೋ-ಎಡ್ ಸ್ಕೂಲ್" (Best Co-Ed School in Mangalore) ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಭಾರತದ ಪ್ರಮುಖ ಶಿಕ್ಷಣ ನಿಯತಕಾಲಿಕ “ಎಜುಕೇಶನ್ ವರ್ಲ್ಡ್” 2024ರ ಅ. 17ರಂದು ದಿಲ್ಲಿಯ ಆಂಬಿಯೆನ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಈ ಪ್ರಶಸ್ತಿಯನ್ನು ಹಲವು ಬಾರಿ ಪಡೆದುಕೊಂಡಿದೆ. ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಮಂಗಳೂರಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಳು, ಉತ್ತಮ ಕಲಿಕೆಯ ವಾತಾವರಣ ನಿರ್ಮಾಣ ಸೇರಿ ಹಲವು ಸಾಧನೆಗಳನ್ನು ಗಮನಿಸಿ ಪ್ರೆಸ್ಟೀಜ್ ಇಂಟರ್ನ್ಯಾಶನಲ್ ಸ್ಕೂಲ್ ಗೆ ಈ ಬಹುಮಾನವನ್ನು ಘೋಷಿಸಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News