ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ “ ಗ್ಲೋಬಲ್ ಎಜ್ಯುಕೇಷನ್ ಕಾನ್ ಕ್ಲೇವ್-2023” ಪ್ರಶಸ್ತಿ

Update: 2023-11-13 10:22 GMT

ಹೊಸದಿಲ್ಲಿ: ರಾಮದಾ ಪ್ಲಾಝಾ, ಪಿತಾಂಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ನ ಚೇರ್ಮ್ಯಾನ್ ಹೈದರಲಿ ಅವರು "ವರ್ಲ್ಡ್ ಎಜ್ಯುಕೇಷನ್ ಕಾನ್ ಕ್ಲೇವ್-2023" ಪ್ರಶಸ್ತಿಯನ್ನು ಸ್ವೀಕರಿಸಿದರು. 

ಗ್ಲೋಬಲ್ ಎಜ್ಯುಕೇಷನ್ ಕಾನ್ ಕ್ಲೇವ್-2023 ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಪುರಸ್ಕಾರವಾಗಿದೆ. ಈ ಪ್ರಶಸ್ತಿಗಳು ಉತ್ತಮ ಸಾಧನೆಗಳ ಕಡೆಗೆ ಇತರರನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ.  ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಮಹತ್ವದ ಕೊಡುಗಡಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸಿದಶ ಶಿಕ್ಷಣ ಸಂಸ್ಥೆಗಳ ಗುಣ ಮಟ್ಟ ಮತ್ತು ವೈವಿಧ್ಯತೆಯನ್ನು ಇದು ಎತ್ತಿ ತೋರಿಸುತ್ತದೆ.

"ಗ್ಲೋಬಲ್ ಎಜ್ಯುಕೇಷನ್ ಕಾನ್ ಕ್ಲೇವ್-2023" ಶೀರ್ಷಿಕೆಯು ಜಾಗತಿಕ ಶಾಲಾ ಕಾಲೇಜುಗಳು, ವಿ.ವಿಗಳು, ಸ್ಟಾರ್ಟಪ್ ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು  ವ್ಯಾಖ್ಯಾನಿಸುತ್ತದೆ.

ಇಂಟರ್ ನ್ಯಾಷನಲ್ ಸ್ಕೂಲ್ ನ ಈ ಗಮನಾರ್ಹ ಸಾಧನೆಗೆ ಸ್ಕೂಲ್ ನ ಚೇರ್ಮ್ಯಾನ್ ಹೈದರಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News