ಪುತ್ತೂರು: ತೆಂಗಿನ ಮರದಿಂದ ಬಿದ್ದು ಮಹಿಳೆ ಮೃತ್ಯು
Update: 2023-08-09 15:30 GMT
ಪುತ್ತೂರು: ತೆಂಗಿನ ಕಾಯಿ ಕೀಳುವ ಮಹಿಳೆಯೋರ್ವರು ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿಯಲ್ಲಿ ಬುಧವಾರ ನಡೆದಿದೆ.
ಇಲ್ಲಿನ ಪ್ರವೀಣ್ ಬೊಳ್ಳಾಜೆ ಎಂಬವರ ಪತ್ನಿ ಸುಚಿತ್ರ (34) ಮೃತಪಟ್ಟ ಮಹಿಳೆ.
ತೆಂಗಿನ ಮರ ಹತ್ತಿ ಕಾಯಿ ಕೀಳುವ ಬಗ್ಗೆ ಖ್ಯಾತಿ ಪಡೆದಿದ್ದ ಅವರು ಕೆಲ ವರ್ಷಗಳಿಂದ ಈ ಕಾಯಕ ನಡೆಸುತ್ತಿದ್ದರು. ಎಂದಿನಂತೆ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಿದ್ದ ಸಂದರ್ಭ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಮಹಿಳೆಯಾಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕ ಮಾಡುತ್ತಿದ್ದ ಸುಚಿತ್ರ ಅವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿತ್ತು. ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.