ಎಸ್‌ಒಎಫ್ ಪರೀಕ್ಷೆ: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಧನೆ

Update: 2023-07-19 16:34 GMT

ಮಂಗಳೂರು, ಜು.19: ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನ ಎಸ್‌ಒಎಫ್ ಪರೀಕ್ಷೆಯಲ್ಲಿ ನಗರದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ಎಸ್‌ಒಎಫ್ ಶೈಕ್ಷಣಿಕ ಸಂಸ್ಥೆಯಾಗಿದ್ದು, ಶಾಲಾ ಮಕ್ಕಳಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಎಸ್‌ಒಎಫ್ ಒಲಿಂಪಿಯಾಡ್‌ ನಲ್ಲಿ ಮೊದಲ ಹಂತದಲ್ಲಿ ಶಾಲೆಯ 597 ವಿದ್ಯಾರ್ಥಿಗಳು ಭಾಗವಹಿಸಿದ್ದು, 40 ವಿದ್ಯಾರ್ಥಿಗಳು ದ್ವಿತೀಯ ಹಂತಕ್ಕೆ ಸ್ಪರ್ಧಿಸಿದ್ದಾರೆ. ಅವರಲ್ಲಿ ಆಹಾನ್ ಅಮಿನ್(1ನೇ ತರಗತಿ) - ಚಿನ್ನದ ಪದಕದೊಂದಿಗೆ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್, ಜ್ಯೋತಿ ದೀಪ್ತಾ ಕುಂದು (3 ನೇ ತರಗತಿ) ಅಂತರ್‌ ರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ತೃತೀಯ ರ‍್ಯಾಂಕ್, ಆನ್ವಿ ಅಮೋಲ್ ಭೋಸಲೆ(3ನೇ ತರಗತಿ) ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಲಯ ಮಟ್ಟದ ಬೆಳ್ಳಿಯ ಪದಕವನ್ನು ಪಡೆದಿದ್ದಾರೆ. ಸಾಯಿ ಪ್ರತೀಕ್ಷಾ ಕಾರ್ತಿಕೇಯನ್ (12 ನೇ ತರಗತಿ) ತ್ರಿಷಿಕಾ (2ನೇ ತರಗತಿ) ವಲಯ ಪುರಸ್ಕಾರ, ಮೆರಿಟ್ ಪ್ರಮಾಣ ಪತ್ರ ಮತ್ತು ಗಿಫ್ಟ್ ವೋಚರ್‌ಗಳನ್ನು ಪಡೆದರು.

ರಿಶನ್ ಫೆರ್ನಾಂಡಿಸ್ (9ನೇ ತರಗತಿ), ಲಾರೆನ್ ಮರಿಯನ್ ಪತ್ರಾವೊ (9ನೇ ತರಗತಿ), ಜೇನ್ ವಿನಿಟಿಯ ವಿ.ಮೊರಾಸ್ (9ನೇ ತರಗತಿ), ಅರ್ಜುನ್ ಕುಮಾರ್ (11ನೇ ತರಗತಿ)ಮತ್ತು ಪಾರವಿ (3ನೇ ತರಗತಿ) ಅವರು ಈ ಪರೀಕ್ಷೆಯಲ್ಲಿ ವಲಯ ಶ್ರೇಷ್ಠತೆಯ ಪ್ರಮಾಣ ಪತ್ರವನ್ನು ಪಡೆದರು. ಎಸ್‌ಒಎಫ್ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ಗಾಗಿ ಅತ್ಯುತ್ತಮ ಜಿಲ್ಲಾ ಶಿಕ್ಷಕರ ಪ್ರಶಸ್ತಿಯನ್ನು ಶಾಲಾ ಶಿಕ್ಷಕಿ ಎಂ.ಎಸ್. ಪದ್ಮಶ್ರೀ ಭಟ್ ಪಡೆದು ಶ್ರೇಷ್ಟ ಸಾಧನೆ ಮಾಡಿದ್ದಾರೆ ಎಂದು ವಿದ್ಯಾಸಂಸ್ಥೆಯ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News