ಸಮಸ್ತ ಮುಅಲ್ಲಿಂ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅ.20 ತನಕ ಅವಕಾಶ

Update: 2023-10-04 16:03 GMT

ಮಂಗಳೂರು: ಸಮಸ್ತ ಪರೀಕ್ಷಾ ಬೋರ್ಡ್ ನಡೆಸುವ ಮುಅಲ್ಲಿಂ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಲೋವರ್, ಹೈಯರ್, ಸೆಕೆಂಡರಿ ಮೂರು ವಿಭಾಗಗಳಿಗಾಗಿ ಪ್ರಸಕ್ತ ವರ್ಷ ಡಿಸೆಂಬರ್ 23,24 ದಿನಾಂಕಗಳಲ್ಲಿ ನಡೆಯುವ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ.

ಇದು ಮದರಸ ಶಿಕ್ಷಕ ವೃತ್ತಿಯ ಯೋಗ್ಯತೆಯನ್ನು ನಿರ್ಣಯಿಸುವ ಅರ್ಹತಾ ಪರೀಕ್ಷೆಯಾಗಿದ್ದು ನವೀಕೃತ ಮುಅಲ್ಲಿಂ ಸರ್ವಿಸ್ ರಿಜಿಸ್ಟರ್ ಹೊಂದಿರುವವರು ಉದ್ಯೋಗದಲ್ಲಿರುವ ಮದರಸದ ರೇಂಜಿನಲ್ಲಿ ಇದಕ್ಕೆ ಅಪೇಕ್ಷೆ ಸಲ್ಲಿಸಬಹುದು.

ಲೋವರ್ ಪ್ರಾಥಮಿಕ ಹಂತ, ತದನಂತರ ಸರದಿಯಾಗಿ ಹೈಯರ್ ಮತ್ತು ಸೆಕೆಂಡರಿ, ಸಮಸ್ತದ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹೈಯರ್ ಪರೀಕ್ಷೆ, ಪ್ಲಸ್ ಟು ಪಬ್ಲಿಕ್ ಪರೀಕ್ಷೆಯಲ್ಲಿ ಪಾಸಾದವರು ಸೆಕೆಂಡರಿ ಪರೀಕ್ಷೆ ಕ್ರಮದಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಸಮಸ್ತ ಅಂಗೀಕೃತ ಸಂಸ್ಥೆಗಳ ಮುತವ್ವಲ್ ಕೋರ್ಸ್ ಸೆಕೆಂಡರಿಗೂ ಮುಕ್ತಸರ್ ಕೋರ್ಸ್ ಹೈಯರ್ ಗೂ ಸಮಾನವಾಗಿರುತ್ತದೆ.

ಅರ್ಜಿಗಳು ಆಯಾ ರೇಂಜ್ ಐಟಿ ಕೋಡಿನೆಟರ್ ಗಳ ಮುಖಾಂತರ ಒಟ್ಟಾಗಿ https://online.samastha.info ಸೈಟ್ ನಲ್ಲಿ ಆನ್ಲೈನ್ ಆಗಿ ಸಲ್ಲಿಸಬೇಕು. ಸಮಸ್ತ ಮುಫತ್ತಿಶುಗಳು ಮತ್ತು ಕಚೇರಿ ಅನುಮೋದಿಸಿದ ನಂತರ ನಿಗದಿತ ಶುಲ್ಕ ಪಾವತಿ ಮಾಡಬೇಕಾಗುತ್ತದೆ . ಹೆಚ್ಚಿನ ಮಾಹಿತಿಗಾಗಿ ಆಯಾ ರೇಂಜಿನ ಮುಫತ್ತಿಶುಗಳನ್ನು ಸಂಪರ್ಕಿಸ ಬೇಕಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News