ಮಣಿಪುರದಲ್ಲಿ ಹಿಂಸಾಚಾರ: ಕಾಪುವಿನಲ್ಲಿ ಪ್ರತಿಭಟನೆ

Update: 2023-07-22 16:11 GMT

ಕಾಪು: ಕಳೆದ ಎರಡು ತಿಂಗಳಿಂದ ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದ ಹಾಗೂ ಮಹಿಳೆಯರ ಮೇಲಿನ ಪೈಶಾಚಿಕ ಕೃತ್ಯವನ್ನು ಖಂಡಿಸಿ ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯದಾದ್ಯಂತ ಪ್ರತಿಭಟನೆಯ ಅಂಗವಾಗಿ ವಿಮ್ ಕಾಪು ಘಟಕ ವತಿಯಿಂದ ಶನಿವಾರ ಸಂಜೆ ಕಾಪು ಪೇಟೆಯ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಮ್‍ನ ಜಿಲ್ಲಾಧ್ಯಕ್ಷೆ ನಾಝೀಯ ನಶ್ರುಲ್ಲಾ, ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿದ್ದು ನೂರಾರು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿರುತ್ತಾರೆ. ಸಾವಿರಾರು ಕುಟುಂಬಗಳು ಪ್ರಾಣಭಿಕ್ಷೆಗಾಗಿ ಮೊರೆಯಿಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿ ಲೈಂಗಿಕ ಕಿರುಕುಳ ನೀಡಿ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆಯು ಅತ್ಯಂತ ಘೋರ ಕೃತ್ಯವಾಗಿದೆ. ಇದು ವಾಸ್ತವದಲ್ಲಿ ಬೆತ್ತಲೆಯಾಗಿರುವುದು ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ. ಮತ್ತು ಇದು ಸರಕಾರೀ ಪ್ರಾಯೋಗಿಕ ಹತ್ಯಾಕಾಂಡವಾಗಿದೆ ಎಂದು ದೂರಿದರು.

ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹಾಜಿರ, ವಿಮ್ ಕಾಪು ಘಟಕದ ಅಧ್ಯಕ್ಷೆ ಫರ್ಝಾನ, ಕಾಪು ಘಟಕದ ಪ್ರಧಾನ ಕಾರ್ಯದರ್ಶಿ ನೌಶಿನ್ ಕಾಪು ಮತ್ತಿತರರು ಉಪಸ್ಥಿತರಿದ್ದರು. ಇನಿಯಾನ ಫರ್ವೀನ್ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News