ವಿಟ್ಲ: ಗುಡ್ಡ ಜರಿದು ಮಣ್ಣಿನಡಿ ಸಿಲುಕಿದ ಕಾರ್ಮಿಕರು

Update: 2023-12-29 09:39 GMT

ವಿಟ್ಲ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರ್ ಸಮೀಪದ ಕಾಯರಡ್ಕ ಎಂಬಲ್ಲಿ ಶುಕ್ರವಾರ ನಡೆದಿದೆ.

ಕಾರ್ಮಿಕರನ್ನು ಸ್ಥಳೀಯರಾದ ರಾಜೇಶ್ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಎಂದು ಗುರುತಿಸಲಾಗಿದೆ.

ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಯುತ್ತಿದ್ದು,  ಮಣ್ಣು ಅಗೆದು ಪಾಯ ಮಾಡುತ್ತಿದ್ದ ವೇಳೆ  ಮೇಲಿನ‌ ಗುಡ್ಡ ಜರಿದು ಬಿದ್ದಿದೆ. ಕೂಡಲೇ‌ ಕಾರ್ಮಿಕರನ್ನು ರಕ್ಷಣೆ ಮಾಡಿದ ಸ್ಥಳೀಯರು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್, ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News