ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ: 5 ಎನ್‌ಜಿಒಗಳ ಪರವಾನಿಗೆ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ

Update: 2024-04-04 07:07 GMT

ಕೇಂದ್ರ ಗೃಹ ಸಚಿವಾಲಯ | Photo : PTI 

ಹೊಸ ದಿಲ್ಲಿ: ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಕನಿಷ್ಠ ಐದು ಸರಕಾರೇತರ ಸಂಸ್ಥೆಗಳ (ಎನ್‌ಜಿಒ) ಪರವಾನಿಗೆಯನ್ನು ಕೇಂದ್ರ ಗೃಹ ಸಚಿವಾಲಯವು ರದ್ದುಗೊಳಿಸಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

“ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ನೋಂದಣಿ ರದ್ದುಗೊಂಡಿರುವುದರಿಂದ ಈ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದಾಗಲಿ ಅಥವಾ ಹಾಲಿ ಲಭ್ಯವಿರುವ ನಿಧಿಯಲ್ಲಿ ಬಳಸಿಕೊಳ್ಳಲಾಗಲಿ ಸಾಧ್ಯವಿಲ್ಲ” ಎಂದೂ ಮೂಲಗಳು ಹೇಳಿವೆ.

ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ, ಸಿಎನ್ಐ ಸಿನೋಡಿಕಲ್ ಬೋರ್ಡ್ ಆಫ್ ಸೋಷಿಯಲ್ ಸರ್ವಿಸಸ್, ಇಂಡೊ-ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ, ಚರ್ಚ್ಸ್ ಆಕ್ಸಿಲರಿ ಫಾರ್ ಸೋಷಿಯಲ್ ಆ್ಯಕ್ಷನ್ ಹಾಗೂ ಎವಾಂಜೆಲಿಕಲ್ ಫೆಲೊಶಿಪ್ ಆಫ್ ಇಂಡಿಯಾ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ.

ಈ ಕುರಿತು ಎನ್‌ಜಿಒಗಳು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News