ಒಂದು ದೇಶ ಒಂದು ಚುನಾವಣೆ | ಮೊದಲ ಸಭೆ ನಡೆಸಿದ ಜೆಪಿಸಿ
ಹೊಸದಿಲ್ಲಿ : ಏಕಕಾಲಿಕ ಚುನಾವಣೆಗಳಿಗೆ ಅವಕಾಶ ಕಲ್ಪಿಸುವ ಎರಡು ಮಸೂದೆಗಳ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯು ಬುಧವಾರ ತನ್ನ ಮೊದಲ ಸಭೆಯನ್ನು ನಡೆಸಿತು.
ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳು ಉದ್ದೇಶಿತ ಕಾನೂನುಗಳಲ್ಲಿಯ ನಿಬಂಧನೆಗಳ ಕುರಿತು ಸಮಿತಿ ಸದಸ್ಯರಿಗೆ ಮಾಹಿತಿಗಳನ್ನು ಒದಗಿಸಿದರು.
ಬಿಜೆಪಿ ಸಂಸದ ಹಾಗೂ ಮಾಜಿ ಸಹಾಯಕ ಕಾನೂನು ಸಚಿವ ಪಿ.ಪಿ.ಚೌಧರಿ ನೇತೃತ್ವದ 39 ಸದಸ್ಯರ ಸಮಿತಿಯು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ಜೆಡಿಯುದ ಸಂಜಯ್ ಝಾ, ಶಿವಸೇನೆಯ ಶ್ರೀಕಾಂತ ಶಿಂದೆ, ಆಪ್‌ನ ಸಂಜಯ್ ಸಿಂಗ್ ಮತ್ತು ಟಿಎಂಸಿಯ ಕಲ್ಯಾಣ ಬ್ಯಾನರ್ಜಿ ಸೇರಿದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಸಂಸದರನ್ನು ಒಳಗೊಂಡಿದೆ.
ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಸಂವಿಧಾನ(129ನೇ ತಿದ್ದುಪಡಿ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆಗಳನ್ನು ಮಂಡಿಸಲಾಗಿದ್ದು,ಬಳಿಕ ಅವುಗಳನ್ನು ಜೆಪಿಸಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು.
ಸಮಿತಿಯು ಲೋಕಸಭೆಯ 27 ಮತ್ತು ರಾಜ್ಯಸಭೆಯ 12 ಸದಸ್ಯರನ್ನು ಒಳಗೊಂಡಿದೆ.