ಬೇಸಿಗೆ ತಾಪಮಾನದಲ್ಲಿ ತೀವ್ರ ಹೆಚ್ಚಳ; ವಿದ್ಯುತ್ ಬೇಡಿಕೆ ಶೇ.19ರಷ್ಟು ಏರಿಕೆ ಸಾಧ್ಯತೆ

Update: 2025-03-25 22:33 IST
ಬೇಸಿಗೆ ತಾಪಮಾನದಲ್ಲಿ ತೀವ್ರ ಹೆಚ್ಚಳ; ವಿದ್ಯುತ್ ಬೇಡಿಕೆ ಶೇ.19ರಷ್ಟು ಏರಿಕೆ ಸಾಧ್ಯತೆ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಹಾಲಿ ಬೇಸಿಗೆಯಲ್ಲಿ ಭಾರತವು ಅಧಿಕ ಪ್ರಮಾಣದಲ್ಲಿ ಉಷ್ಣಮಾರುತಗಳನ್ನು ಎದುರಿಸುವ ನಿರೀಕ್ಷೆಯಿದ್ದು ವಿದ್ಯುತ್ ಬೇಡಿಕೆಯಲ್ಲಿ ಶೇ.9ರಿಂದ 10ರಷ್ಟು ಏರಿಕೆಗೆ ದೇಶವು ಸಿದ್ಧವಾಗಿರಬೇಕೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ಅಖಿಲ ಭಾರತ ಮಟ್ಟದಲ್ಲಿ ವಿದ್ಯುತ್‌ನ ಉತ್ತುಂಗ ಬೇಡಿಕೆಯು ಮಾರ್ಚ್ 30ರಂದು 250 ಗಿಗಾವ್ಯಾಟ್(ಜಿ.ಡಬ್ಲ್ಯು)ಗಳನ್ನು ದಾಟಿತ್ತು. ಹವಾಮಾನ ಬದಲಾವಣೆಯಿಂದ ಉಂಟಾದ ತಾಪಮಾನದ ಏರಿಕೆಯು, ವಿದ್ಯುತ್ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ.

ಭಾರತದ ಪ್ರಸಕ್ತ ಒಟ್ಟು ವಿದ್ಯುತ್ ಬೇಡಿಕೆಯು ಕೈಗಾರಿಕೆಗಳು, ಗೃಹಗಳು ಹಾಗೂ ಕೃಷಿ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.33, ಶೇ.28 ಹಾಗೂ ಶೇ.19ರಷ್ಟನ್ನು ಒಳಗೊಂಡಿವೆ. ಗೃಹಬಳಕೆಯ ವಿದ್ಯುತ್ ಬೇಡಿಕೆಯು ಕಳೆದ ಒಂದು ದಶಕದಲ್ಲಿ ಅತ್ಯಂತ ವೇಗದ ಹೆಚ್ಚಳವನ್ನು ಕಂಡಿದೆ ಎಂದು ಇಂಧನ, ಪರಿಸರ ಹಾಗೂ ಜಲ ಕುರಿತ ದಿಲ್ಲಿ ಮೂಲದ ಚಿಂತನಾಚಿಲುಮೆಯ ಹಿರಿಯ ಯೋಜನಾ ಮುಖ್ಯಸ್ಥೆ ದಿಶಾ ಅಗರ್ವಾಲ್ ತಿಳಿಸಿದ್ದಾರೆ.

ಗೃಹಬಳಕೆಯ ವಿದ್ಯುತ್ ಬೇಡಿಕೆಯು 2012-13ರಲ್ಲಿ ಶೇ.22ರಷ್ಟಿದ್ದುದು 2022-23ರಲ್ಲಿ ಶೇ.25ಕ್ಕೇರಿತು. ಆರ್ಥಿಕ ಬೆಳವಣಿಗೆ ಹಾಗೂ ತಾಪಮಾನ ಹೆಚ್ಚಳವು ಕೂಲಿಂಗ್ ಸಾಧನಗಳ ಬೇಡಿಕೆಯಲ್ಲಿ ಏರಿಕೆಗೆ ಕಾರಣವಾಗಿದೆ ಎಂದವರು ತಿಳಿಸಿದ್ದಾರೆ.

2024ರ ಬೇಸಿಗೆಯಲ್ಲಿ ದಾಖಲೆಯ ತಾಪಮಾನ ಹಿನ್ನೆಲೆಯಲ್ಲಿ ದೇಶಾದ್ಯಂತ ರೂಂ ಏರ್‌ಕಂಡೀಶನರ್‌ನ ಮಾರಾಟದಲ್ಲಿ ಶೇ.40ರಿಂದ ಶೇ.50ರಷ್ಟು ಏರಿಕೆಯಾಗಿತ್ತೆಂದು ಅಗರ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News