ಯುಟ್ಯೂಬ್ ನಿಂದ ‘ನಯಾ ಭಾರತ್’ ತೆಗೆದು ಹಾಕಲು ಕಾನೂನು ಕ್ರಮ

ಕುನಾಲ್ ಕಾಮ್ರಾ | PC : NDTV
ಮುಂಬೈ: ಯುಟ್ಯೂಬ್ ನಲ್ಲಿರುವ ತನ್ನ ಇತ್ತೀಚೆಗಿನ ಸ್ಟಾಂಡ್ ಅಪ್ ವೀಡಿಯೊ ‘ನಯಾ ಭಾರತ್’ಗೆ ಹಕ್ಕು ಸ್ವಾಮ್ಯ ತಡೆ ಕಳುಹಿಸಿರುವುದಕ್ಕಾಗಿ ಸ್ಟಾಂಡ್ ಅಪ್ ಕಮೇಡಿಯನ್ ಸಂಗೀತ ಕಂಪೆನಿ ಟಿ ಸಿರೀಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ವೀಡಿಯೊದಲ್ಲಿ ಹಾಡಿನ ಮೂಲ ಸಾಹಿತ್ಯ ಅಥವಾ ಮೂಲ ಸಂಗೀತೋಪಕರಣಗಳನ್ನು ಬಳಸಿಲ್ಲ ಎಂದು ಕುನಾಲ್ ಕಾಮ್ರಾ ಪ್ರತಿಪಾದಿಸಿದ್ದಾರೆ.
‘‘ಹಲೋ ಟಿ ಸಿರೀಸ್, ಕೈಗೊಂಬೆಯಾಗಬೇಡಿ. ಸಾಹಿತ್ಯವನ್ನು ಬದಲಾಯಿಸಿದ ವಿಡಂಬನೆಯ ಹಾಡು ಕಾನೂನಾತ್ಮಕವಾಗಿ ನ್ಯಾಯಯುತ ಬಳಕೆಯ ಅಡಿಯಲ್ಲಿ ಬರುತ್ತದೆ. ನಾನು ವೀಡಿಯೊದಲ್ಲಿ ಹಾಡಿನ ಮೂಲ ಸಾಹಿತ್ಯ ಅಥವಾ ಮೂಲ ಸಂಗೀತೋಪಕರಣಗಳನ್ನು ಬಳಸಿಲ್ಲ’’, ಎಂದು ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕಂಟೆಂಟ್ ಕ್ರಿಯೇಟರ್ ಗಳನ್ನು ಸಿಲುಕಿಸುವ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು, ಇಂತಹ ಕ್ರಮಗಳು ಅಪಾಯಕಾರಿ ಎಂದಿದ್ದಾರೆ.
ಭಾರತದಲ್ಲಿರುವ ಪ್ರತಿಯೊಂದು ಏಕಸ್ವಾಮ್ಯವೂ ಮಾಫಿಯಾಕ್ಕಿಂತ ಕಡಿಮೆ ಅಲ್ಲ. ಆದುದರಿಂದ ಈ ವೀಡಿಯೊವನ್ನು ಯುಟ್ಯೂಬ್ ನಿಂದ ತೆಗೆದು ಹಾಕುವುದಕ್ಕಿಂತ ಮುನ್ನ ನೋಡಿ, ಡೌನ್‌ಲೋಡ್ ಮಾಡಿ ಎಂದು ಕಾಮ್ರಾ ಪ್ರತಿಪಾದಿಸಿದ್ದಾರೆ.