ಮಣಿಪುರದಲ್ಲಿ ಲಘುಭೂಕಂಪನ
Update: 2025-03-29 23:07 IST

ಇಂಫಾಲ: ಮಣಿಪುರದ ನೊನೆಯಿ ಜಿಲ್ಲೆಯಲ್ಲಿ ಶನಿವಾರ ಲಘ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ ದಾಖಲಾಗಿತ್ತು. ಆದರೆ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ.
ಮಧ್ಯಾಹ್ನ 2:31ರ ವೇಳೆಗೆ ಭೂಕಂಪನವಾಗಿದ್ದು, ಅದರರ ಕೇಂದ್ರ ಬಿಂದು ನೊನೆಯಿ ಜಿಲ್ಲೆಯಲ್ಲಿ ನೆಲದಿಂದ 10 ಕಿ.ಮೀ. ಆಳದಲ್ಲಿತ್ತೆಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.