ಬ್ಯಾಂಕ್‌ಗಳು ಪ್ರಜೆಗಳನ್ನು ಲೂಟಿಗೈಯುವ ಕಲೆಕ್ಷನ್ ಏಜೆಂಟ್‌ಗಳಾಗಿಬಿಟ್ಟಿವೆ: ಕಾಂಗ್ರೆಸ್

PC: PTI
ಹೊಸದಿಲ್ಲಿ: ಎಟಿಎಂ ನಗದು ಹಿಂತೆಗೆತಕ್ಕೆ ವಿಧಿಸಲಾಗುವ ಶುಲ್ಕಗಳನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬ್ಯಾಂಕ್‌ಗನ್ನು ಪ್ರಜೆಗಳನ್ನು ಲೂಟಿ ಮಾಡುವ ಕಲೆಕ್ಷನ್ ಏಜೆಂಟರುಗಳ ಮಟ್ಟಕ್ಕೆ ಇಳಿಸಲಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಕಾಂಗ್ರೆಸ್ ಅಧ್ಯಕ್ಷ . ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಂಕ್‌ಗಳು ವಿಧಿಸುವ ಶುಲ್ಕವನ್ನು ಪಟ್ಟಿಯೊಂದನ್ನು ನೀಡಿದ್ದು, ಯಾತನಾಮಯ ಬೆಲೆಯೇರಿಕೆ ಮತ್ತು ಕಡಿವಾಣರಹಿತ ಲೂಟಿಯೇ ಬಿಜೆಪಿಯ ಮಂತ್ರವಾಗಿದೆ ಎಂದರು.
ದುರದೃಷ್ಟವಶಾತ್ ನಮ್ಮ ಬ್ಯಾಂಕ್‌ಗಳು ಮೋದಿ ಸರಕಾರದ ಕಲೆಕ್ಷನ್ ಏಜೆಂಟ್‌ಗಳಾಗಿವೆ. ಎಟಿಎಂ ಹಿಂತೆಗೆತ ಶುಲ್ಕಗಳು ದುಬಾರಿಯಾಗಲಿವೆ ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ 2018ರಿಂದ 2024ರ ನಡುವೆ ಉಳಿತಾಯ ಖಾತೆ ಹಾಗೂ ಜನಧನ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸದೆ ಇರುವ ಖಾತೆಗಳಿಂದ ಮೋದಿ ಸರಕಾರವು ಕನಿಷ್ಠ 43,500 ಕೋಟಿ ರೂ.ಗಳನ್ನು ಪಡೆದುಕೊಂಡಿದೆ.
ಖಾತೆಗಳು ಚಟುವಟಿಕೆರಹಿತವಾಗಿದ್ದಕ್ಕಾಗಿ ಪ್ರತಿ ವರ್ಷ 100-200 ರೂ. ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕ್ ಸ್ಟೇಟ್‌ಮೆಂಟ್ ನೀಡುವುದಕ್ಕೆ 500-100 ರೂ., ಎಸ್‌ಎಂಎಸ್ ಆಲರ್ಟ್‌ಗಾಗಿ ತ್ರೈಮಾಸಿಕವಾಗಿ 20-25 ರೂ., ಸಾಲ ಪರಿಷ್ಕರಣೆ ಶುಲ್ಕವಾಗಿ ಶೇ.1-3 ಶುಲ್ಕವನ್ನು ವಿಧಿಸಲಾಗುತ್ತದೆ.
ಒಂದು ವೇಳೆ ಸಕಾಲದಲ್ಲಿ ಸಾಲವನ್ನು ಪಾವತಿಸಿದಲ್ಲಿ ಆಗ ಬ್ಯಾಂಕ್ ಗಳು ಸಾಲ ಮುಕ್ತಾಯ ಶುಲ್ಕಗಳನ್ನು ವಿಧಿಸುತ್ತವೆ. ಎನ್‌ಇಎಫ್‌ಟಿ ಹಾಗೂ ಡಿಮಾಂಡ್ ಡ್ರಾಫ್ಟ್ ಶುಲ್ಕಗಳು ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಿದೆ. ಸಹಿ ಶುಲ್ಕ ಮತ್ತಿತರ ಕೆವೈಸಿ ಅಪ್‌ಡೇಟ್‌ಗಳಿಗೂ ಶುಲ್ಕ ವಿಧಿಸಲಾಗುತ್ತದೆ ಎಂದರು.