ವೆಸ್ಟ್‌ ಇಂಡೀಸ್ ಟೆಸ್ಟ್ ನಾಯಕತ್ವ ತ್ಯಜಿಸಿದ ಬ್ರಾತ್‌ ವೇಟ್

Update: 2025-04-01 21:11 IST
Brathwaite

ಬ್ರಾತ್‌ ವೇಟ್| PC : X 

  • whatsapp icon

ಬಾರ್ಬಡೋಸ್ : ನಾಲ್ಕು ವರ್ಷಗಳ ನಂತರ ಕ್ರೆಗ್ ಬ್ರಾತ್‌ ವೇಟ್ ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಶಾಯ್ ಹೋಪ್ ಟಿ20 ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ ಎಂದು ಕ್ರಿಕೆಟ್ ವೆಸ್ಟ್‌ ಇಂಡೀಸ್(ಸಿಡಬ್ಲ್ಯುಐ)ಸೋಮವಾರ ತಿಳಿಸಿದೆ.

32ರ ಹರೆಯದ ಬ್ರಾತ್‌ ವೇಟ್‌ ರನ್ನು 2021ರ ಮಾರ್ಚ್‌ನಲ್ಲಿ ಜೇಸನ್ ಹೋಲ್ಡರ್ ಬದಲಿಗೆ ವೆಸ್ಟ್‌ ಇಂಡೀಸ್ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು.

ವೆಸ್ಟ್‌ ಇಂಡೀಸ್ ಏಕದಿನ ತಂಡದ ನಾಯಕನಾಗಿರುವ ಹೋಪ್ ಅವರು ಇದೀಗ ರೊವ್‌ ಮನ್ ಪೊವೆಲ್ ಬದಲಿಗೆ ಟಿ20 ನಾಯಕತ್ವ ಹೊಣೆ ಹೊತ್ತಿದ್ದಾರೆ. ಪೊವೆಲ್ 2023ರ ಮೇನಿಂದ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಬ್ರಾತ್‌ ವೇಟ್ ನಾಯಕತ್ವದಲ್ಲಿ ವೆಸ್ಟ್‌ ಇಂಡೀಸ್ ತಂಡ 27 ವರ್ಷಗಳ ನಂತರ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಕಳೆದ ವರ್ಷ ಬ್ರಿಸ್ಬೇನ್‌ ನಲ್ಲಿ 8 ರನ್‌ನಿಂದ ರೋಚಕ ಜಯ ಸಾಧಿಸಿ ಈ ಸಾಧನೆ ಮಾಡಿತ್ತು.

ಈ ವರ್ಷಾರಂಭದಲ್ಲಿ ಪಾಕಿಸ್ತಾನದಲ್ಲಿ ಸ್ಮರಣೀಯ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ತಂಡದ ನಾಯಕತ್ವವಹಿಸಿದ್ದರು. 34 ವರ್ಷಗಳಲ್ಲಿ ಮೊದಲ ಬಾರಿ ಸರಣಿಯನ್ನು 1-1ರಿಂದ ಸಮಬಲಗೊಳಿಸಲು ತಂಡದ ನೇತೃತ್ವವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News