ಮಧ್ಯಪ್ರದೇಶ: ಧಾರ್ಮಿಕ ಮಹತ್ವದ 19 ಸ್ಥಳಗಳಲ್ಲಿ ಮದ್ಯನಿಷೇಧ ಜಾರಿ

Update: 2025-04-01 22:27 IST
ಮಧ್ಯಪ್ರದೇಶ: ಧಾರ್ಮಿಕ ಮಹತ್ವದ 19 ಸ್ಥಳಗಳಲ್ಲಿ ಮದ್ಯನಿಷೇಧ ಜಾರಿ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಭೋಪಾಲ : ಮಧ್ಯಪ್ರದೇಶದಲ್ಲಿಯ ಧಾರ್ಮಿಕ ಮಹತ್ವ ಹೊಂದಿರುವ 19 ನಗರಗಳು ಮತ್ತು ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ಮಂಗಳವಾರದಿಂದ ಮದ್ಯ ನಿಷೇಧ ಜಾರಿಗೊಂಡಿದೆ.

ನಿಷೇಧವನ್ನು ‘ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಕ್ರಮ’ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಈ ಸ್ಥಳಗಳೊಂದಿಗೆ ಗುರುತಿಸಿಕೊಂಡಿರುವ ಸಾರ್ವಜನಿಕ ನಂಬಿಕೆ ಮತ್ತು ಧಾರ್ಮಿಕ ಮಹತ್ವ ಈ ಕ್ರಮಕ್ಕೆ ಪ್ರೇರಣೆಯಾಗಿದೆ ಎಂದಿದ್ದಾರೆ.

ಉಜ್ಜೈನ್,ಓಂಕಾರೇಶ್ವರ,ಚಿತ್ರಕೂಟ ಸೇರಿದಂತೆ 13 ನಗರಗಳು ಮತ್ತು ಆರು ಗ್ರಾಮ ಪಂಚಾಯತ್‌ಗಳಲ್ಲಿ ಎಲ್ಲ ಮದ್ಯದ ಅಂಗಡಿಗಳು ಮತ್ತು ಬಾರ್‌ಗಳು ಕಾಯಂ ಆಗಿ ಮುಚ್ಚಲಿವೆ.

ರಾಜ್ಯ ಸಂಪುಟವು ತನ್ನ ಜ.24ರ ಸಭೆಯಲ್ಲಿ ಈ ಸ್ಥಳಗಳಲ್ಲಿ ಮದ್ಯವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಹಿಂದುಗಳಿಗೆ ಪವಿತ್ರವಾಗಿರುವ ನರ್ಮದಾ ನದಿಯ ಐದು ಕಿ.ಮೀ.ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಆಗ ಯಾದವ್ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News