ಇಂಡಿಗೋ ಸಿಬ್ಬಂದಿ ವಿರುದ್ಧ ಮಗುವಿನ ಚಿನ್ನದ ಸರ ಕದ್ದ ಆರೋಪ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರು ಐದು ವರ್ಷದ ಮಗುವಿನ ಚಿನ್ನದ ಸರವೊಂದನ್ನು ಕದ್ದಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ಈ ಘಟನೆಯ ಬಗ್ಗೆ ತನಗೆ ಮಾಹಿತಿ ಇದೆ ಮತ್ತು ಈ ವಿಷಯದಲ್ಲಿ ತನಿಖಾ ಸಂಸ್ಥೆಗಳಿಗೆ ನಾವು ಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಇಂಡಿಗೋ ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಿಮಾನ ಸಿಬ್ಬಂದಿಯೊಬ್ಬರು ನನ್ನ ಮಗುವನ್ನು ಶೌಚಾಲಯದತ್ತ ಕರೆದೊಯ್ದರು ಹಾಗೂ ಆ ಬಳಿಕ ಮಗುವಿನ ಕೊರಳಲ್ಲಿದ್ದ ಚಿನ್ನದ ಸರ ಕಾಣೆಯಾಗಿದೆ ಎಂಬುದಾಗಿ ಬೆಂಗಳೂರಿನಲ್ಲಿ ದೂರು ದಾಖಲಿಸಿರುವ ಮಗುವಿನ ತಾಯಿ ಪ್ರಿಯಾಂಕಾ ಮುಖರ್ಜಿ ಆರೋಪಿಸಿದ್ದಾರೆ.
ನಾನು ನನ್ನ ಇಬ್ಬರು ಮಕ್ಕಳೊಂದಿಗೆ ಇಂಡಿಗೋ ವಿಮಾನ 6e 661ರಲ್ಲಿ ಕೇರಳದ ತಿರುವನಂತಪುರಮ್ ನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ನನ್ನ ಒಂದು ಮಗು ಧರಿಸಿದ್ದ ಸುಮಾರು 80,000 ರೂ. ಮೌಲ್ಯದ 20 ಗ್ರಾಮ್ ತೂಕದ ಚಿನ್ನದ ಸರವನ್ನು ವಿಮಾನ ಸಿಬ್ಬಂದಿ ಅದಿತಿ ಅಶ್ವಿನಿ ಶರ್ಮಾ ತೆಗೆದಿದ್ದಾರೆ ಎಂದು ಮುಖರ್ಜಿ ಆರೋಪಿಸಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.