ಗುಜರಾತ್ | ತರಕಾರಿ ಕದ್ದ ಆರೋಪ; ಮಹಿಳೆ, ಆಕೆಯ ಪುತ್ರಿಗೆ ಥಳಿತ

Update: 2025-04-11 22:00 IST
ಗುಜರಾತ್ | ತರಕಾರಿ ಕದ್ದ ಆರೋಪ; ಮಹಿಳೆ, ಆಕೆಯ ಪುತ್ರಿಗೆ ಥಳಿತ

PC :@CP_SuratCity

  • whatsapp icon

ಅಹ್ಮದಾಬಾದ್ : ತರಕಾರಿ ಕದ್ದ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಪುತ್ರಿಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿದ ಹಾಗೂ ಬೆತ್ತದಲ್ಲಿ ಥಳಿಸಿದ ಘಟನೆ ಗುಜರಾತ್ ನ ಸೂರತ್ ನ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ನಡೆದಿದೆ.

ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಮಹಿಳೆ ಹಾಗೂ ಆಕೆಯ ಪುತ್ರಿಗೆ ಥಳಿಸುತ್ತಿರುವುದು, ಹಲವರು ನಿಂತು ನೋಡುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಈ ಘಟನೆ ನಡೆದರೂ, ಅವರಿಬ್ಬರ ನೆರವಿಗೆ ಯಾರು ಬಂದಿಲ್ಲ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸೆಕ್ಯುರಿಟಿ ಗಾರ್ಡ್ನಂತೆ ಕಾಣುವ ವ್ಯಕ್ತಿಯೊಬ್ಬರ ಹಣೆಯಲ್ಲಿ ರಕ್ತಸ್ರಾವವಾಗುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಆ ವ್ಯಕ್ತಿ ಕೈಯಲ್ಲಿ ಬೆತ್ತ ಹಿಡಿದುಕೊಂಡು ಮಹಿಳೆಯತ್ತ ನಡೆದುಕೊಂಡು ಹೋಗುತ್ತಿರುವುದು, ಅನಂತರ ಆಕೆಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದುಕೊಂಡು ಬರುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಇದೇ ಸಂದರ್ಭ ಇತರ ಇಬ್ಬರು ಯುವತಿಗೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಅವರು ಯುವತಿಯ ಕೂದಲನ್ನು ಹಿಡಿದು ಎಳೆಯುತ್ತಿರುವುದು, ಆಕೆಯನ್ನು ನೆಲಕ್ಕೆ ತಳ್ಳಿ ಹೊಟ್ಟೆಗೆ ಒದೆಯುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

ಸೂರತ್ ಪೊಲೀಸರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವೈರಲ್ ವೀಡಿಯೊ ಹಂಚಿಕೊಂಡು ಘಟನೆಯನ್ನು ದೃಢಪಡಿಸಿದ್ದಾರೆ. ಅಲ್ಲದೆ, ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

‘‘ಸೂರತ್ನ ಎಪಿಎಂಸಿಯಿಂದ ತರಕಾರಿಗಳನ್ನು ಕಳವುಗೈದ ಆರೋಪದಲ್ಲಿ ಮಹಿಳೆ ಹಾಗೂ ಯುವತಿಗೆ ಹಲ್ಲೆ ನಡೆಸಿದ ಘಟನೆಯಲ್ಲಿ ಸೂರತ್ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ’’ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News