ಮೋದಿಜಿ ಅಷ್ಟೂ ಶಕ್ತಿವಂತರಾಗಿದ್ದರೆ, ಪುಲ್ವಾಮಾ ದಾಳಿ ಪ್ರಕರಣದಲ್ಲಿ ಯಾರನ್ನೂ ಏಕೆ ಬಂಧಿಸಿಲ್ಲ? : ಸುಪ್ರಿಯಾ ಶ್ರಿನೇತ್

Update: 2025-04-11 22:02 IST
ಮೋದಿಜಿ ಅಷ್ಟೂ ಶಕ್ತಿವಂತರಾಗಿದ್ದರೆ, ಪುಲ್ವಾಮಾ ದಾಳಿ ಪ್ರಕರಣದಲ್ಲಿ ಯಾರನ್ನೂ ಏಕೆ ಬಂಧಿಸಿಲ್ಲ? : ಸುಪ್ರಿಯಾ ಶ್ರಿನೇತ್

ಸುಪ್ರಿಯಾ ಶ್ರಿನೇತ್‌ | PC : PTI

  • whatsapp icon

ಹೊಸದಿಲ್ಲಿ: ಮೋದಿಜಿ ಅಷ್ಟು ಶಕ್ತಿವಂತರಾಗಿದ್ದರೆ ಪುಲ್ವಾಮಾ ದಾಳಿ ಪ್ರಕರಣದಲ್ಲಿ ಯಾರನ್ನೂ ಏಕೆ ಬಂಧಿಸಿಲ್ಲ? ಸುಧಾಂಶು ತ್ರಿವೇದಿಯನ್ನು ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಪ್ರಶ್ನಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ನ್ಯೂಸ್ 18 ಚರ್ಚೆಯ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್, ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರಿಗೆ ಆಡಳಿತ ಪಕ್ಷದ ಆಯ್ಕೆಗಳು ಮತ್ತು ಹೊಣೆಗಾರಿಕೆಯ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಿದರು.

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅನ್ನು ಉಲ್ಲೇಖಿಸಿದ ಶ್ರಿನೇತ್, ʼಹೇಮಂತ್ ಕರ್ಕರೆ ನನ್ನ ಶಾಪದಿಂದ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ಮಹಾತ್ಮ ಗಾಂಧಿ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿದ ಮಹಿಳೆಯನ್ನು ನಿಮ್ಮ ಪಕ್ಷವು ಸಂಸತ್ತಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ನಾನು ಈ ಪ್ರಶ್ನೆಯನ್ನು ಮೊದಲೇ ಕೇಳಿದ್ದೆ, ಆದರೆ ನೀವು ಅದನ್ನು ನಿರ್ಲಕ್ಷಿಸಿದ್ದೀರಿʼ ಎಂದು ಹೇಳಿದರು.

ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ನಮ್ಮ 40 ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಯಾರನ್ನೂ ಏಕೆ ಬಂಧಿಸಲಾಗಿಲ್ಲ? ನೀವು ಮೋದಿಯ ಶಕ್ತಿಯ ಬಗ್ಗೆ ಹೆಮ್ಮೆಪಡುತ್ತೀರಿ. ಆದರೆ, ಆಗ ಅದು ಎಲ್ಲಿತ್ತು? ಎಂದು ಪ್ರಶ್ನಿಸಿದರು.

ಗಾಲ್ವಾನ್ ವ್ಯಾಲಿ ಘರ್ಷಣೆ ಬಗ್ಗೆ ಉಲ್ಲೇಖಿಸಿದ ಸುಪ್ರಿಯಾ ಶ್ರಿನೇತ್, ಚೀನಾದಲ್ಲಿ 20 ಜೀವಗಳನ್ನು ಬಲಿ ತೆಗೆದುಕೊಂಡ ಬಗ್ಗೆ ಏನು ಹೇಳುತ್ತೀರಿ? ನಮ್ಮ ವಿದೇಶಾಂಗ ಸಚಿವರು ಚೀನಾ ದೊಡ್ಡ ಆರ್ಥಿಕತೆ ಎಂದು ಹೇಳುತ್ತಾರೆ ಮತ್ತು ಅವರೊಂದಿಗೆ ಕೇಕ್ ಕತ್ತರಿಸುತ್ತಾರೆ. ಸುಂಕಗಳ ಬಗ್ಗೆ ಮೌನ ಏಕೆ? ಭಾರತೀಯರನ್ನು ಏಕೆ ಸಂಕೋಲೆ ಹಾಕಿ USನಿಂದ ಗಡೀಪಾರು ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ಐಟಿ ಸೆಲ್‌ನ ಧ್ರುವ್ ಸಕ್ಸೇನಾ ಐಎಸ್ಐ ಜೊತೆ ಏಕೆ ನಂಟು ಹೊಂದಿದ್ದಾರೆ? ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಂಬಂಧ ಹೊಂದಿರುವ ತಾರಿಕ್ ಅಹ್ಮದ್ ಮೀರ್ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದೇಕೆ? ಭಯೋತ್ಪಾದಕ ತಾಲಿಬ್ ಹುಸೇನ್ ಷಾ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಮ್ಮ ಐಟಿ ಸೆಲ್ ಮುಖ್ಯಸ್ಥನಾದದ್ದು ಹೇಗೆ? ಎಂದು ಪ್ರಶ್ನಿಸಿದರು.

ನೀವು ಸೈಫುಲ್ಲಾಗೆ ಟಿಕೆಟ್ ನೀಡಿದ್ದೀರಿ. ಪಾಕಿಸ್ತಾನ ಝಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ ಮಹಿಳೆಯನ್ನು ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನದ ಪ್ರಮುಖರನ್ನಾಗಿ ಮಾಡಿದ್ದೀರಿ. ಅದು ತಪ್ಪು ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.

2008ರ ದಾಳಿಯ ಹೊರತಾಗಿಯೂ ನೀವು ಪಾಕಿಸ್ತಾನಕ್ಕೆ ಏಕೆ ಭೇಟಿ ನೀಡಿದ್ದೀರಿ ಮತ್ತು ನವಾಜ್ ಷರೀಫ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಏಕೆ ಕೋರಿದ್ದೀರಿ? ಮೋದಿ ಜಿ ಎಲ್ಲವನ್ನೂ ಮಾಡಲು ಸಾಧ್ಯವಾದರೆ, ಅವರು ಏಕೆ ಮಣಿಪುರಕ್ಕೆ ಭೇಟಿ ನೀಡಬಾರದು? ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News