ನಿರುದ್ಯೋಗಿಗಳನ್ನು ‘ಆಕಾಂಕ್ಷಿ ಯುವ’ ಎಂದು ಕರೆಯಲು ಮಧ್ಯಪ್ರದೇಶ ಸರಕಾರ ನಿರ್ಧಾರ!

Update: 2025-03-29 22:35 IST
ನಿರುದ್ಯೋಗಿಗಳನ್ನು ‘ಆಕಾಂಕ್ಷಿ ಯುವ’ ಎಂದು ಕರೆಯಲು ಮಧ್ಯಪ್ರದೇಶ ಸರಕಾರ ನಿರ್ಧಾರ!

Photo : PTI

  • whatsapp icon

ಭೋಪಾಲ್: ರಾಜ್ಯದ ನಿರುದ್ಯೋಗಿ ಯುವಜನರಿಗೆ ಆಕಾಂಕ್ಷಿ ಯುವ ಎಂದು ಕರೆಯುವ ಮಧ್ಯಪ್ರದೇಶ ಸರಕಾರದ ನಿರ್ಧಾರವನ್ನು ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಉದ್ಯೋಗರಹಿತ ವ್ಯಕ್ತಿಗಳನ್ನು ಅಣಕಿಸಲಾಗುತ್ತಿದೆ ಎಂದು ಆಪಾದಿಸಲಾಗಿದೆ.

ಮಧ್ಯಪ್ರದೇಶ ಸರಕಾರದ ರೋಜ್‌ಗಾರ್ ಪೋರ್ಟಲ್, ಮಧ್ಯಪ್ರದೇಶದ ನಿರುದ್ಯೋಗಿ ಯುವಕರ ಸಂಖ್ಯೆಯನ್ನು ಪಟ್ಟಿ ಮಾಡುವಾಗ ಆಕಾಂಕ್ಷಿ ಯುವ ಎಂಬ ಪದವನ್ನು ಬಳಸಿದೆ ಹಾಗೂ ಅವರ ಸಂಖ್ಯೆ 29.37 ಲಕ್ಷಕ್ಕಿಂತಲೂ ಅಧಿಕವೆಂದು ಪ್ರದರ್ಶಿಸಿದೆ.

ಮಧ್ಯಪ್ರದೇಶ ಸರಕಾರದ ತಾಂತ್ರಿಕ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಗೌತಮ್ ಟೆಂಟ್‌ವಾಲ್ ಶನಿವಾರ ಈ ಬಗ್ಗೆ ಹೇಳಿಕೆ ನೀಡಿ, ಸರಕಾರಿ ಅಥವಾ ಸರಕಾರೇತರ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದು, ಉನ್ನತ ಹುದ್ದೆಗಳನ್ನು ಪಡೆಯುವ ಹಂಬಲವಿರುವವರು ಮತ್ತು ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿತರಾಗಿರುವ ನಿರುದ್ಯೋಗಿಗಳನ್ನು ಆಕಾಂಕ್ಷಿ ಯುವ ಎಂಬುದಾಗಿ ಕರೆಯಲಾಗುವುದೆಂದು ತಿಳಿಸಿದ್ದರು.

ಮಧ್ಯಪ್ರದೇಶ ಸರಕಾರದ ನಡೆಯನ್ನು ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಸಮರ್ಥಿಸಿಕೊಂಡಿದ್ದಾರೆ. ಮಧ್ಯಪ್ರದೇಶ ಹಾಗೂ ದೇಶದಲ್ಲಿ ಉದ್ಯೋಗಗಳನ್ನು ಒದಗಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ. ಈ ಕಾರಣಕ್ಕಾಗಿಯೇ ರಾಜ್ಯ ಸರಕಾರವು ಮೆಗಾ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಸಂಯೋಜಿಸಲಿದ್ದು, ಅಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News