ನಿಯಂತ್ರಣ ರೇಖೆಯಲ್ಲಿ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪಾಕಿಸ್ತಾನ ಸೇನೆಯು ಮಂಗಳವಾರ ಜಮ್ಮುಕಾಶ್ಮೀರದ ಪೂಂಛ್‌ನಲ್ಲಿಯ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ ಎಂದು ಭಾರತೀಯ ಸೇನೆಯು ತಿಳಿಸಿದೆ.
ಪಾಕ್ ಕಡೆಯಲ್ಲಿ ಯಾವುದೇ ಸಾವುನೋವುಗಳನ್ನು ಭಾರತೀಯ ಸೇನೆಯು ವರದಿ ಮಾಡಿಲ್ಲ, ಆದರೆ ಸ್ಫೋಟದಲ್ಲಿ ಮತ್ತು ನಂತರದ ಗುಂಡಿನ ಚಕಮಕಿಯಲ್ಲಿ ಐವರು ಶತ್ರುಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎ.1ರಂದು ಪಾಕಿಸ್ತಾನ ಸೇನೆಯು ಎಲ್‌ಒಸಿಯನ್ನು ಅತಿಕ್ರಮಿಸಿದ್ದರಿಂದ ಕೃಷ್ಣಾ ಘಾಟಿ ವಿಭಾಗದಲ್ಲಿ ನೆಲಬಾಂಬ್ ಸ್ಫೋಟಿಸಿದೆ. ನಂತರ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ ಎಂದು ಜಮ್ಮುವಿನ ರಕ್ಷಣಾ ಪಿಆರ್‌ಒ ಲೆ.ಕ.ಸುನೀಲ್ ಬರ್ತ್ವಾಲ್ ತಿಳಿಸಿದರು.
ಭಾರತೀಯ ಯೋಧರು ನಿಯಂತ್ರಿತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಪ್ರದೇಶದಲ್ಲಿ ನಿಗಾ ಮುಂದುವರಿದಿದೆ ಎಂದೂ ಅವರು ತಿಳಿಸಿದರು.
ಎಲ್‌ಒಸಿಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದಕ್ಕೆ ಭಾರತೀಯ ಸೇನೆಯ ಬದ್ಧವಾಗಿದೆ ಅವರು ಒತ್ತಿ ಹೇಳಿದರು.