ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆಯನ್ನು ಕೈಬಿಡುವಂತೆ ಕೋರಲಿರುವ ಬಿಜೆಪಿಯ ಮಿತ್ರಪಕ್ಷ ಟಿಡಿಪಿ; ವರದಿ

ಚಂದ್ರಬಾಬು ನಾಯ್ಡು (Photo: PTI)
ಹೊಸದಿಲ್ಲಿ: ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ್ನು ಬೆಂಬಲಿಸಿರುವ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾದ ತೆಲುಗು ದೇಶಂ ಪಕ್ಷ (TDP), ಒಂದು ಪ್ರಮುಖ ಬದಲಾವಣೆ ಮಾಡುವಂತೆ ಕೇಂದ್ರ ಸರಕಾರವನ್ನು ಕೋರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಬೆಂಬಲ ನೀಡುವಂತೆ ತನ್ನ 16 ಮಂದಿ ಲೋಕಸಭಾ ಸಂಸದರಿಗೆ ವಿಪ್ ಜಾರಿಗೊಳಿಸಿರುವ ತೆಲುಗು ದೇಶಂ ಪಕ್ಷ, ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರ ನೇಮಕಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಲಿದೆ ಎಂದು ಹೇಳಲಾಗಿದ್ದು, "ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಸಂಬಂಧಿತ ರಾಜ್ಯಗಳಿಗೆ ಬಿಡಬೇಕು ಎಂದು ಪಕ್ಷವು ಸರ್ವಾನುಮತದಿಂದ ಆಗ್ರಹಿಸಲಿದೆ" ಎಂದು ತೆಲುಗು ದೇಶಂ ಪಕ್ಷದ ಮೂಲಗಳು ತಿಳಿಸಿವೆ.
ಉಳಿದಂತೆ, ವಕ್ಫ್ ಮಂಡಳಿಗಳಿಗೆ ಮಹಿಳೆಯರನ್ನು ಸೇರ್ಪಡೆ ಮಾಡುವುದೂ ಸೇರಿದಂತೆ, ಮಸೂದೆಯ ಎಲ್ಲ ತಿದ್ದುಪಡಿಗಳನ್ನು ಪಕ್ಷವು ಬೆಂಬಲಿಸಲಿದೆ. ಅದು ಪ್ರಗತಿಪರ ಬದಲಾವಣೆಯಾಗಿದೆ" ಎಂದೂ ಪಕ್ಷದ ಮೂಲಗಳು ಹೇಳಿವೆ.