ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ನಿಗೆ ನೀಡಿದ್ದ ಭದ್ರತೆ ಕಡಿತಗೊಳಿಸಿದ ಕೇಂದ್ರ ಸರಕಾರ!
Update: 2025-04-05 12:20 IST

ಗುರುಶರಣ್ ಕೌರ್ (PTI)
ಹೊಸದಿಲ್ಲಿ: ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರ ಭದ್ರತೆಯನ್ನು Z+ ಶ್ರೇಣಿಯಿಂದ ನಿಂದ Z ವರ್ಗಕ್ಕೆ ಇಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮನಮೋಹನ್ ಸಿಂಗ್ ಅವರ ಪತ್ನಿಗೆ Z+ ಶ್ರೇಣೀಯ ಭದ್ರತೆ ನೀಡಲಾಗಿತ್ತು. ಆದರೆ, ಇದೀಗ ಪರಿಶೀಲನೆಯ ಬಳಿಕ ಅವರ ಭದ್ರತೆಯನ್ನು Z ಶ್ರೇಣಿಗೆ ಕಡಿತಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ, ಸಿಆರ್‌ಪಿಎಫ್ ವಿಐಪಿ ಭದ್ರತಾ ವಿಭಾಗಕ್ಕೆ ಝಡ್ ವರ್ಗದ ಪ್ರಕಾರ ಕೌರ್‌ಗೆ ಸಿಬ್ಬಂದಿ ಮತ್ತು ಪ್ರೋಟೋಕಾಲ್ ಕಡಿತಗೊಳಿಸಲು ನಿರ್ದೇಶಿಸಿದೆ. Z ಶ್ರೇಣಿ ಭದ್ರತೆಯಡಿಯಲ್ಲಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ನಿವಾಸಕ್ಕೆ ಹನ್ನೆರಡು ಸಶಸ್ತ್ರ ಕಮಾಂಡೋಗಳು ಭದ್ರತೆಯನ್ನು ಒದಗಿಸಲಿದ್ದಾರೆ.