ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿರುವ AIMPLB

Update: 2025-04-04 22:10 IST
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿರುವ AIMPLB

ಸಾಂದರ್ಭಿಕ ಚಿತ್ರ 

  • whatsapp icon

ಹೊಸದಿಲ್ಲಿ: ದೇಶಾದ್ಯಂತ ಇರುವ ಎಲ್ಲ ವಕ್ಫ್ ಮಂಡಳಿಗಳು, ರಾಷ್ಟ್ರೀಯ ಸಂಘಟನೆಗಳು, ಮುಸ್ಲಿಮರು ಹಾಗೂ ನ್ಯಾಯಪರ ನಾಗರಿಕರ ಬಲವಾದ ವಿರೋಧದ ಹೊರತಾಗಿಯೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ, 2025ರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಹಾಗೂ ಕಾನೂನು ಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಶುಕ್ರವಾರ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಘೋಷಿಸಿದೆ.

ಈ ಕುರಿತು ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಝ್ಲುರ್ ರಹೀಂ ಮುಜದ್ದಿದಿ, “ವಕ್ಫ್ ತಿದ್ದುಪಡಿ ಮಸೂದೆ, 2025ಕ್ಕೆ ಸಂಸತ್ತಿನ ಅಂಗೀಕಾರ ದೊರೆತಿರುವುದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪಾಲಿಗೆ ಕಪ್ಪು ಚುಕ್ಕೆಯಾಗಿದೆ. ತನ್ನ ಅಧಿಕಾರದಿಂದ ಅಮಲೇರಿಸಿಕೊಂಡಿರುವ ಆಡಳಿತಾರೂಢ ಸರಕಾರವು, ತನ್ನದೇ ಆದ ತಪ್ಪುಗಳು ಹಾಗೂ ಪ್ರಮಾದಗಳನ್ನು ಮರೆಮಾಚಲು ದೇಶದಲ್ಲಿ ವಿಭಜನಕಾರಿ ವಾತಾವರಣವನ್ನು ನಿರ್ಮಿಸುತ್ತಿದ್ದು, ಈ ಮಸೂದೆಯು ಆ ಕಾರ್ಯಸೂಚಿಯ ಭಾಗವಾಗಿದೆ” ಎಂದು ಆರೋಪಿಸಿದ್ದಾರೆ.

“ಮುಸ್ಲಿಮರ ಸಮಸ್ಯೆಗಳನ್ನು ಪರಿಹರಿಸುವ ಸೋಗಿನಲ್ಲಿ ತರಲಾಗಿರುವ ಈ ಮಸೂದೆಯು ಮುಸ್ಲಿಮರಿಗೆ ಅಸಮ್ಮತವಾಗಿದ್ದು, ಇದರಿಂದಾಗಿ ವಕ್ಫ್ ಆಸ್ತಿಗಳು ವಿನಾಶವಾಗಲಿವೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ ಹಾಗೂ ಇನ್ನಿತರ ರಾಷ್ಟ್ರೀಯ ಸಂಘಟನೆಗಳ ಬೇಡಿಕೆಗಳಿಗೆ ಸರಕಾರ ಗಮನ ನೀಡಿಲ್ಲ ಹಾಗೂ ವಿರೋಧ ಪಕ್ಷಗಳ ಸಂಸದರು ಹಾಗೂ ನಾಗರಿಕ ಸಮಾಜದ ಧ್ವನಿಗಳನ್ನು ಕಡೆಗಣಿಸಿದೆ” ಎಂದೂ ಈ ಪತ್ರಿಕಾ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News