ಜಮ್ಮುಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡಲಾಗುವುದು: ಅಮಿತ್‌ ಶಾ

Update: 2025-03-29 22:38 IST
ಜಮ್ಮುಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡಲಾಗುವುದು: ಅಮಿತ್‌ ಶಾ

Photo Credit: PTI

  • whatsapp icon

ಹೊಸದಿಲ್ಲಿ: ಈ ಹಿಂದೆಯೇ ಭರವಸೆ ನೀಡಿದಂತೆ ಜಮ್ಮುಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಆದರೆ ಇದಕ್ಕೆ ಅವರು ಯಾವುದೇ ಕಾಲಮಿತಿಯನ್ನು ನೀಡಿಲ್ಲ. ಶುಕ್ರವಾರ ಸಂಜೆ ಹೊಸದಿಲ್ಲಿಯಲ್ಲಿ ನಡೆದ ‘ಟೈಮ್‌ನೌ ಶೃಂಗಸಭೆ-2025’ರಲ್ಲಿ ಅವರು ಮಾತನಾಡುತ್ತಿದ್ದರು.ಕಳೆದ ವರ್ಷ ಜಮ್ಮುಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯು ಶಾಂತಿಯತವಾಗಿ ನೆರವೇರಿತು. ಜಮ್ಮುಕಾಶ್ಮೀರದಲ್ಲಿ 40 ವರ್ಷಗಳ ಬಳಿಕ ಮೊದಲ ಬಾರಿಗೆ, ಯಾವುದೇ ಸ್ಥಳದಲ್ಲಿ ಮರುಮತದಾನ ನಡೆಯಲಿಲ್ಲ. ಒಂದೇ ಒಂದು ಅಶ್ರುವಾಯು ಅಥವಾ ಬುಲೆಟ್ ಅನ್ನು ಎಸೆಯಲಾಗಿಲ್ಲ. ಶೇ.60ರಷ್ಟು ಮಂದಿ ಮತದಾನ ಮಾಡಿದ್ದರು. ಇದೊಂದು ದೊಡ್ಡ ಬದಲಾವಣೆಯಾಗಿದೆ ಎಂದರು.

‘‘ಜಮ್ಮುಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ನೀಡಲಾಗುವುದೆಂಬ ಭರವಸೆಯನ್ನು ನಾವು ಮೊದಲಿನಿಂದಲೂ ನೀಡುತ್ತಾ ಬಂದಿದ್ದೇವೆ. ಆದರೆ ಯಾವಾಗ ನೀಡಲಾಗುವುದು ಎಂಬುದನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ’’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News