ʼನೋಂದಣಿಯಾಗದʼ 136 ಮದರಸಗಳಿಗೆ ಬೀಗ ಹಾಕಿದ ಉತ್ತರಾಖಂಡ ಸರಕಾರ

Update: 2025-03-25 21:50 IST
ʼನೋಂದಣಿಯಾಗದʼ 136 ಮದರಸಗಳಿಗೆ ಬೀಗ ಹಾಕಿದ ಉತ್ತರಾಖಂಡ ಸರಕಾರ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಡೆಹ್ರಾಡೂನ್: ರಾಜ್ಯಾದ್ಯಂತದ 136 ಮದರಸಗಳಿಗೆ ಉತ್ತರಾಖಂಡ ಸರಕಾರ ಬೀಗ ಹಾಕಿದೆ. ಈ ಮದರಸಗಳು ಶಿಕ್ಷಣ ಇಲಾಖೆ ಅಥವಾ ಮದರಸ ಮಂಡಳಿಯಲ್ಲಿ ನೋಂದಣಿಯಾಗಿಲ್ಲ ಎಂದು ಉತ್ತರಾಖಂಡ ಸರಕಾರ ಪ್ರತಿಪಾದಿಸಿದೆ.

ರಾಜ್ಯದಲ್ಲಿ ಸರಿಸುಮಾರು 450 ಮದರಸಗಳು ನೋಂದಣಿಯಾಗಿವೆ. 500 ಮದರಸಗಳು ಶಿಕ್ಷಣ ಇಲಾಖೆ ಅಥವಾ ಮದರಸ ಮಂಡಳಿಯಲ್ಲಿ ನೋಂದಣಿಯಾಗದೆ ಕಾರ್ಯ ನಿರ್ವಹಿಸುತ್ತಿವೆ ಎಂದು ರಾಜ್ಯ ಸರಕಾರ ಅಂದಾಜಿಸಿದೆ ಎಂದು ಪತ್ರಿಕೆಯೊಂದು ಉಲ್ಲೇಖಿಸಿದೆ. ಈ ಮದರಸಗಳು ಸೊಸೈಟಿಗಳ ನೋಂದಣಿ ಕಾಯ್ದೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅದು ಹೇಳಿದೆ.

ಅಕ್ರಮ ಮದರಸ, ಅನಧಿಕೃತ ಪ್ರಾರ್ಥನಾ ಮಂದಿರಗಳು ಹಾಗೂ ಅತಿಕ್ರಮಗಳ ವಿರುದ್ಧ ಕ್ರಮ ಮುಂದುವರಿಯಲಿದೆ. ಉತ್ತರಪ್ರದೇಶದ ಗಡಿಯಲ್ಲಿರುವ ಪಟ್ಟಣಗಳಲ್ಲಿ ನೋಂದಣಿಯಾಗದ ಮದರಸಗಳು ಕಾರ್ಯ ನಿರ್ವಹಿಸುತ್ತಿರುವುದು ವರದಿಯಾಗಿದೆ. ಇಂತಹ ಅನಧಿಕೃತ ಸಂಸ್ಥೆಗಳು ಗಂಭೀರ ಭದ್ರತಾ ಅಪಾಯವನ್ನು ಒಡ್ಡುತ್ತವೆ ಎಂದು ಸರಕಾರ ಹೇಳಿದೆ.

ಬೀಗ ಹಾಕಲಾದ ಮದರಸಗಳಲ್ಲಿ ಉಧಮ್ ಸಿಂಗ್ ನಗರದ 64, ಡೆಹ್ರಾಡೂನ್‌ನ 44, ಹರಿದ್ವಾರದ 26 ಹಾಗೂ ಪೌರಿ ಗರ್ವಾಲ್‌ನ 2 ಮದರಸಗಳು ಸೇರಿವೆ ಎಂದು ಅದು ತಿಳಿಸಿದೆ.

ಈ ಸಂಸ್ಥೆಗಳ ಹಣಕಾಸಿನ ಮೂಲಗಳ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News