ಭಾರತದ RAW ವಿರುದ್ಧ ನಿರ್ಬಂಧಕ್ಕೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಶಿಫಾರಸು: ವರದಿ

Update: 2025-03-26 20:21 IST
ಭಾರತದ RAW ವಿರುದ್ಧ ನಿರ್ಬಂಧಕ್ಕೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಶಿಫಾರಸು: ವರದಿ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಅಂತರರಾಷ್ಟೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕದ ಆಯೋಗವು ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆ ಸಂಚುಗಳಲ್ಲಿ ಭಾಗಿಯಾಗಿರುವ ಆರೋಪಗಳಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(RAW) ವಿರುದ್ಧ ಉದ್ದೇಶಿತ ನಿರ್ಬಂಧಗಳಿಗೆ ಶಿಫಾರಸು ಮಾಡಿದೆ.

ಮಂಗಳವಾರ ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರದಿಯಲ್ಲಿ ಆಯೋಗವು, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದೂ ಹೇಳಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಳಿಗಾಗಿ ಭಾರತವನ್ನು ‘ವಿಶೇಷ ಕಳವಳದ ದೇಶ’ ಎಂದು ಘೋಷಿಸುವಂತೆಯೂ ಆಯೋಗವು ಅಮೆರಿಕ ಸರಕಾರವನ್ನು ಆಗ್ರಹಿಸಿದೆ.

ಧಾರ್ಮಿಕ ವ್ಯವಹಾರಗಳನ್ನು ನಿಯಂತ್ರಿಸಲು ಹೆಚ್ಚುತ್ತಿರುವ ಪ್ರಯತ್ನಗಳಿಗಾಗಿ ಕಮ್ಯುನಿಸ್ಟ್ ಆಡಳಿತದ ವಿಯೆಟ್ನಾಂ ಅನ್ನೂ ಗುರಿಯಾಗಿಸಿಕೊಂಡಿರುವ ವರದಿಯು, ಅದನ್ನೂ ವಿಶೇಷ ಕಳವಳದ ದೇಶವನ್ನಾಗಿ ಘೋಷಿಸುವಂತೆ ಶಿಫಾರಸು ಮಾಡಿದೆ. ಚೀನಾದ ಕುರಿತು ಸಮಾನ ಕಳವಳಗಳಿಂದಾಗಿ ಅಮೆರಿಕವು ಭಾರತದಂತೆ ವಿಯೆಟ್ನಾಂ ಜೊತೆಗೂ ತನ್ನ ಸಂಬಂಧವನ್ನು ಬಲಗೊಳಿಸಲು ಬಯಸಿದೆ.

ಆಯೋಗದ ಶಿಫಾರಸುಗಳನ್ನು ಪಾಲಿಸುವುದು ಕಡ್ಡಾಯವಲ್ಲ, ಹೀಗಾಗಿ ಟ್ರಂಪ್ ಆಡಳಿತವು ರಾ ವಿರುದ್ಧ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿಲ್ಲ ಎಂದು ವರದಿಯು ಹೇಳಿದೆ.

ಭಾರತವು ಯುಎಸ್ ಮತ್ತು ಕೆನಡಾಗಳಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2023ರಿಂದಲೂ ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆಗಳು ಹೆಚ್ಚಿವೆ.

ಖಾಲಿಸ್ತಾನ್ ಪರ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗಾಗಿ ವಿಫಲ ಸಂಚಿಗೆ ಸಂಬಂಧಿಸಿದಂತೆ ಯುಎಸ್ ಸರಕಾರವು ಭಾರತದ ಮಾಜಿ ಗುಪ್ತಚರ ಅಧಿಕಾರಿ ವಿಕಾಸ್ ಯಾದವರನ್ನು ಆರೋಪಿಯನ್ನಾಗಿ ಹೆಸರಿಸಿದ ಬಳಿಕ ಭಾರತ-ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ.

2024ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳು ಮತ್ತು ತಾರತಮ್ಯಗಳು ಹೆಚ್ಚಳಗೊಂಡಿದ್ದು, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಹದಗೆಡುತ್ತಿರುವುದು ಮುಂದುವರಿದಿದೆ ಎಂದು ಅಮೆರಿಕ ಆಯೋಗವು ತನ್ನ ವರದಿಯಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News