ವಿಶೇಷ ಅಗತ್ಯತೆಯ ಮಗುವಿಗೆ ಹೊಡೆದ ಆರೋಪ; ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

Update: 2025-03-30 08:30 IST
ವಿಶೇಷ ಅಗತ್ಯತೆಯ ಮಗುವಿಗೆ ಹೊಡೆದ ಆರೋಪ; ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

PC: x.com/ndtvfeed

  • whatsapp icon

ಹೊಸದಿಲ್ಲಿ: ಸರಿಯಾಗಿ ಪಾಠ ಕೇಳುತ್ತಿಲ್ಲ ಹಾಗೂ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ತಾಳ್ಮೆ ಕಳೆದುಕೊಂಡ ಶಿಕ್ಷಕನೊಬ್ಬ ವಿಶೇಷ ಅಗತ್ಯತೆಯ ಮಗುವನ್ನು ಅಮಾನುಷವಾಗಿ ಥಳಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೋಯ್ಡಾದ ಸೆಕ್ಟರ್ 55ರ ಗ್ರೀನ್ ರಿಬ್ಬನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿರುವ 10 ವರ್ಷದ ಮಗನನ್ನು ಅಲ್ಲಿ ದಾಖಲಿಸುವ ಸಂದರ್ಭದಲ್ಲಿ ವಿಶೇಷ ಗಮನ ನೀಡುವ ಮತ್ತು ಆತನ ಸುರಕ್ಷತೆಯ ಭವರಸೆಯನ್ನು ಶಾಲಾ ಆಡಳಿತ ನೀಡಿತ್ತು ಎಂದು ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

ಅನಿಲ್ ಕುಮಾರ್ ಎಂಬ ಶಿಕ್ಷಕ ತಮ್ಮ ಮಗನನ್ನು ಥಳಿಸುತ್ತಿರುವ ವಿಡಿಯೊ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಹರಿದಾಡುತ್ತಿದ್ದುದು ಗಮನಕ್ಕೆ ಬಂದಿದೆ. ಇದು ಅಮಾನುಷ ನಡವಳಿಕೆ ಮತ್ತು ಬಾಲಕನಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಬಾಲಕನಿಗೆ ಹೊಡೆಯುತ್ತಾ, ಸಾಧನಗಳು ಮತ್ತು ಚಟುವಟಿಕೆಗಳ ಕಲಂಗಳನ್ನು ಹೊಂದಿಸಿ ಬರೆಯುವುದನ್ನು ಕಲಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಕೆಲ ಸಂದರ್ಭದಲ್ಲಿ ಉತ್ತರಿಸಲು ಮಗು ವಿಫಲವಾದಾಗ, ಗದರಿಸಿ ತಲೆಯ ಮೇಲೆ ಹೊಡೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಶಿಕ್ಷಕ ಮತ್ತಷ್ಟು ಕೋಪಗೊಂಡು ಎದ್ದುನಿಂತ ಸಂದರ್ಭದಲ್ಲಿ ಇತರ ಸಿಬ್ಬಂದಿ ಕ್ಯಾಮೆರಾವನ್ನು ಬೇರೆ ವಿದ್ಯಾರ್ಥಿಗಳತ್ತ ಫೋಕಸ್ ಮಾಡುತ್ತಿರುವುದು ಗೊತ್ತಾಗಿದೆ. ಬೇರೆ ವಿದ್ಯಾರ್ಥಿಗೆ ಸರಿಯಾಗಿ ಕುಳಿತುಕೊಳ್ಳುವಂತೆ ಮತ್ತು ಊಟ ಮಾಡುವಂತೆ ಸೂಚನೆ ನಿಡುತ್ತಿರುವುದು ಕಾಣಿಸುತ್ತಿದೆ. ಹಿನ್ನೆಲೆ ಧ್ವನಿಯಲ್ಲಿ ಆರೋಪಿ ಶಿಕ್ಷಕ ಗದರುತ್ತಿರುವುದು ಮತ್ತು ಹೊಡೆಯುತ್ತಿರುವ ಸದ್ದು ಕೇಳುತ್ತಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News