ವಕ್ಫ್ ಮಸೂದೆಗೆ ʼಉಮೀದ್ʼ ಎಂದು ಮರು ನಾಮಕರಣ: ಕಿರಣ್ ರಿಜಿಜು

Update: 2025-04-02 18:22 IST
Kiren Rijiju

ಸಚಿವ ಕಿರಣ್ ರಿಜಿಜು | PC : PTI 

  • whatsapp icon

ಹೊಸದಿಲ್ಲಿ: ಜಂಟಿ ಸದನ ಸಮಿತಿಯಿಂದ ಪ್ರಸ್ತಾಪಿತಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಪರಿಗಣನೆಗಾಗಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಸದನದಲ್ಲಿ ಮಂಡಿಸಿದರು.

ನಂತರ, ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ವಕ್ಫ್ ತಿದ್ದುಪಡಿ ಮಸೂದೆಗೆ ʼಉಮೀದ್ʼ(Unified Waqf Management Empowerment, Efficiency, and Development (UMEED)) ಎಂದು ಮರು ನಾಮಕರಣ ಮಾಡಲಾಗುವುದು” ಎಂದು ಸದನಕ್ಕೆ ತಿಳಿಸಿದರು.

ಇದೇ ವೇಳೆ, ಆದಿವಾಸಿಗಳಿಗೆ ಸೇರಿದ ಭೂಮಿಯಲ್ಲಿ ವಕ್ಫ್ ಆಸ್ತಿಯನ್ನು ಸೃಷ್ಟಿಸಲು ಮಸೂದೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ತಮ್ಮ ಪಕ್ಷವು ವಿರೋಧಿಸಲಿದೆ ಎಂದು ವೈಎಸ್ಆರ್ಸಿಪಿ ಸಂಸದ ಗುರುಮೂರ್ತಿ ಘೋಷಿಸಿದರು.

ಈ ನಡುವೆ, ಮೋದಿ ಸರಕಾರ ತರಾತುರಿಯಿಂದಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆದಂತೆ, ವಕ್ಫ್ ಮಸೂದೆಯ ವಿಚಾರದಲ್ಲೂ ಆಗಬಾರದು ಎಂದು ಆರ್ಜೆಡಿಯ ನಾಯಕ ಮನೋಜ್ ಝಾ ಕಿವಿಮಾತು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News