Fact Check : ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಚಿತ್ರದಲ್ಲಿ ಅಮೀರ್ ಖಾನ್ ನಟನೆ?

Update: 2025-04-07 17:11 IST
Editor : Ismail
Fact Check : ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಚಿತ್ರದಲ್ಲಿ ಅಮೀರ್ ಖಾನ್ ನಟನೆ?

ಬಾಲಿವುಡ್ ನಟ ಅಮೀರ್ ಖಾನ್ | PC: bharatexpress.com

  • whatsapp icon

ಮುಂಬೈ: ಡಾ ಎಪಿಜೆ ಅಬ್ದುಲ್ ಕಲಾಂ ಅವರ ಪಾತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕಾಣಿಸಿಕೊಂಡ ಟ್ರೇಲರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಡಾ ಎಪಿಜೆ ಅಬ್ದುಲ್ ಕಲಾಂ ಜೀವನಾಧಾರಿತ ಚಲನ ಚಿತ್ರದ ಟ್ರೇಲರ್ ಇದು ಎಂದು ಹೇಳಲಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿತ್ತು.

ಟ್ರೇಲರ್‌ನಲ್ಲಿ ಡಾ.ಕಲಾಂ ಅವರ ಜೀವನ ಪಯಣವನ್ನು ಉಲ್ಲೇಖಿಸಲಾಗಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಜ್ಞಾನಿಯಿಂದ ರಾಷ್ಟ್ರಪತಿವರೆಗೆ ಅವರ ಸ್ಪೂರ್ತಿದಾಯಕ ಜೀವನದ ಬಗ್ಗೆ ಟ್ರೇಲರ್‌ ಬೆಳಕು ಚೆಲ್ಲುತ್ತದೆ. ʼನಿದ್ದೆ ಮಾಡುವಾಗ ನಾವು ಕಾಣುವುದು ಕನಸುಗಳಲ್ಲ, ಕನಸುಗಳು ನಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲʼ ಎಂಬ ಕಲಾಂ ಅವರ ಜನಪ್ರಿಯ ಮಾತುಗಳು ಕೂಡ ಚಿತ್ರದಲ್ಲಿ ಉಲ್ಲೇಖಿತವಾಗಿವೆ.

ಟ್ರೇಲರ್‌ ಕೇವಲ ನಾಲ್ಕು ದಿನಗಳಲ್ಲಿ 30ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Full View

ವಾಸ್ತವವೇನು?

ಅಮೀರ್ ಖಾನ್ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನಾಧಾರಿತ ಚಲನ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಟ್ರೇಲರ್‌ನ ವಾಸ್ತವವೇನು?

ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾತ್ರದಲ್ಲಿ ಕಂಡು ಬಂದ ಟ್ರೇಲರ್‌ ಮುಂಬರುವ ಅಧಿಕೃತ ಚಿತ್ರದ್ದಲ್ಲ. ಅಭಿಮಾನಿಯೋರ್ವ ರಚಿಸಿದ ಕಾಲ್ಪನಿಕ ವೀಡಿಯೊ ಎಂಬುದು ಪರಿಶೀಲನೆಯ ವೇಳೆ ಬಯಲಾಗಿದೆ.

ಟ್ರೇಲರ್ ನಲ್ಲೇ ಈ ಬಗ್ಗೆ ಹೇಳಲಾಗಿದೆ. ಈ ಟ್ರೇಲರ್‌ ಯಾವುದೇ ಅಧಿಕೃತ ಚಿತ್ರ ನಿರ್ಮಾಣ ಸಂಸ್ಥೆ, ಸ್ಟುಡಿಯೋ ಅಥವಾ ನಟನಿಗೆ ಸೇರಿದ್ದಲ್ಲ. ಇದು ಅಧಿಕೃತ ಟ್ರೇಲರ್ ಅಲ್ಲ. ಯಾವುದೇ ಫಿಲ್ಮ್ ಸ್ಟುಡಿಯೋ ಅಥವಾ ಪ್ರೊಡಕ್ಷನ್ ಹೌಸ್ಗೆ ಟ್ರೇಲರ್‌ ಸೇರಿಲ್ಲ ಎಂದು ಟ್ರೇಲರ್‌ನ ಆರಂಭದಲ್ಲೇ ಉಲ್ಲೇಖಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Similar News