IC 814 ವೆಬ್ ಸರಣಿಯಲ್ಲಿ ಕಾಪಿ ರೈಟ್ ಉಲ್ಲಂಘನೆ ಆರೋಪ: ನೆಟ್‌ಫ್ಲಿಕ್ಸ್ ವಿರುದ್ಧ ಮೊಕದ್ದಮೆ ಹೂಡಿದ ANI
Update: 2024-09-09 07:12 GMT
ಹೊಸದಿಲ್ಲಿ : IC 814 ವೆಬ್ ಸರಣಿಯಲ್ಲಿ ಕಾಪಿ ರೈಟ್ ಉಲ್ಲಂಘನೆಗಾಗಿ ನೆಟ್‌ಫ್ಲಿಕ್ಸ್ ವಿರುದ್ಧ ANI ಸುದ್ದಿ ಸಂಸ್ಥೆಯು ಮೊಕದ್ದಮೆ ಹೂಡಿದೆ ಎಂದು Barandbench ವರದಿ ಮಾಡಿದೆ.
ಕಂದಹಾರ್ ವಿಮಾನ ಅಪಹರಣ ಆಧಾರಿತ ನೆಟ್‌ಫ್ಲಿಕ್ಸ್ ವೆಬ್ ಸರಣಿ IC 814ಯಲ್ಲಿ ಆಗಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಜನರಲ್ ಪರ್ವೇಜ್ ಮುಷರಫ್ ಮತ್ತು ಭಯೋತ್ಪಾದಕ ಮಸೂದ್ ಅಝರ್ ಅವರು ಮಾತನಾಡುವ ದೃಶ್ಯಗಳನ್ನು ತನ್ನ ಅನುಮತಿಯಿಲ್ಲದೇ ಬಳಸಲಾಗಿದೆ ಎಂದು ANI ಹೇಳಿದೆ.
ANI ಸಲ್ಲಿಸಿರುವ ದೂರಿನಂತೆ ದಿಲ್ಲಿ ಹೈಕೋರ್ಟ್ ನೆಟ್‌ಫ್ಲಿಕ್ಸ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ನೋಟಿಸ್ ನೀಡಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಲಿದೆ.