ಖಾಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್‌ರಿಂದ ಪಂಜಾಬ್‌ನಲ್ಲಿ ಹೊಸ ರಾಜಕೀಯ ಪಕ್ಷ ಆರಂಭ
ಹೊಸದಿಲ್ಲಿ: ಲೋಕಸಭಾ ಸಂಸದ ಹಾಗೂ ಕಾರಾಗೃಹದಲ್ಲಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಪಂಜಾಬ್‌ನಲ್ಲಿ ಮಂಗಳವಾರ ‘ಅಕಾಲಿ ದಳ’ (ವಾರಿಸ್ ಪಂಜಾಬ್ ಡೆ) ಎಂದು ಕರೆಯಲಾಗುವ ನೂತನ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ.
ಮುಕ್ತಸರ್‌ನ ಮಾಘಿ ಮೇಳದಲ್ಲಿ ಅವರ ಬೆಂಬಲಿಗರು ಈ ಪಕ್ಷವನ್ನು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದ ಸಂದರ್ಭ ಅಮೃತಪಾಲ್ ಅವರು ಹೇಳಿಕೆಯಲ್ಲಿ ‘‘ಪಕ್ಷದ ರಚನೆ ಅಕಾಲಿ ರಾಜಕೀಯದ ಪುನರುಜ್ಜೀವನದತ್ತ ಮೊದಲ ಹೆಜ್ಜೆ’’ ಎಂದಿದ್ದಾರೆ.
ಜೂನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್‌ನ ಖಡೂರ್ ಸಾಹಿಬ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದ ಅಮೃತಪಾಲ್ ಸಿಂಗ್ ಪ್ರಸಕ್ತ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಅಸ್ಸಾಂನ ದಿಬ್ರುಗಢ ಕಾರಾಗೃಹದಲ್ಲಿದ್ದಾರೆ. ಅವರು ಖಾಲಿಸ್ತಾನ ಪ್ರತ್ಯೇಕತಾವಾದಿ ಸಂಘಟನೆ ವಾರಿಸ್ ಪಂಜಾಬ್ ಡೆ ಅಥವಾ ಹೆಯರ್ಸ್ ಆಫ್ ಪಂಜಾಬ್‌ನ ನಾಯಕ.
ಮಂಗಳವಾರ ಪಕ್ಷದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಮೃತ್‌ಪಾಲ್ ಸಿಂಗ್ ಅವರ ತಂದೆ ತರ್ಸೇಮ್ ಸಿಂಗ್, ತನ್ನ ಪುತ್ರ ಅಕಾಲಿ ದಳ (ವಾರಿಸ್ ಪಂಜಾಬ್ ಡೆಯ)ದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲಿದ್ದಾನೆ. ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ ಹಾಗೂ ಪಂಥ್ ಸಮುದಾಯವನ್ನು ಸಂರಕ್ಷಿಸಲು ಎಲ್ಲರೂ ಸಂಘಟಿತರಾಗೋಣ. ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು ಹಾಗೂ ಅರ್ಜಿ ಸಲ್ಲಿಸುವ ಮೂಲಕ ಸದಸ್ಯರಾಗಬಹುದು ಎಂದು ಅವರು ತಿಳಿಸಿದ್ದಾರೆ.
ಅಕಾಲಿ ದಳ (ವಿರಾಸ್ ಪಂಜಾಬ್ ಡೆ)ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತರ್ಸೇಮ್ ಸಿಂಗ್ ಅಲ್ಲದೆ, ಫರೀದ್‌ಕೋಟಾದ ಸಂಸದ ಸರಬ್‌ಜೀತ್ ಸಿಂಗ್ ಖಾಲ್ಸಾ ಕೂಡ ್ಲ ಪಾಲ್ಗೊಂಡಿದ್ದರು.