ರಾಜ್ಯಸಭೆಯಲ್ಲಿ ಅಭಿಷೇಕ್ ಮನು ಸಿಂಘ್ವಿಗೆ ಮೀಸಲಿರಿಸಿದ ಆಸನದಲ್ಲಿ ನಗದು ಪತ್ತೆ, ತನಿಖೆಗೆ ಆದೇಶ
Update: 2024-12-06 06:23 GMT
ಹೊಸದಿಲ್ಲಿ: ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪ್ರಸ್ತುತ ನಿಗದಿಪಡಿಸಲಾದ ಸೀಟ್ ಸಂಖ್ಯೆ 222ರಲ್ಲಿ ನೋಟುಗಳ ಕಂತೆ ಪತ್ತೆಯಾಗಿದೆ ಎಂದು ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಅವರು ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದ್ದು, ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ತೆಲಂಗಾಣ ರಾಜ್ಯದಿಂದ ಚುನಾಯಿತರಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಪ್ರಸ್ತುತ ನೀಡಲಾಗಿರುವ ಸೀಟ್ ಸಂಖ್ಯೆ 222ರಿಂದ ಭದ್ರತಾ ಅಧಿಕಾರಿಗಳು ನೋಟುಗಳ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಷಯವನ್ನು ನನ್ನ ಗಮನಕ್ಕೆ ತರಲಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಿದ್ದೇನೆ ಎಂದು ಜಗದೀಪ್ ಧನ್ಕರ್ ಹೇಳಿದ್ದಾರೆ.