ವಯನಾಡ್ ಜಿಲ್ಲೆಯಲ್ಲಿ ನೂರು ಮನೆಗಳ ನಿರ್ಮಾಣ : ರಾಹುಲ್ ಗಾಂಧಿ ಭರವಸೆ

Update: 2024-08-02 16:54 GMT

 ರಾಹುಲ್ ಗಾಂಧಿ | PC : PTI 

ವಯನಾಡ್ : ಭೂಕುಸಿತಗಳಿಂದ ನೂರಾರು ಮನೆಗಳು ಹಾನಿಗೀಡಾಗಿ 300ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ತನ್ನ ಪಕ್ಷವು ಸಂತ್ರಸ್ತರಿಗಾಗಿ 100 ಮನೆಗಳನ್ನು ನಿರ್ಮಿಸಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಶುಕ್ರವಾರ ಭರವಸೆ ನೀಡಿದರು.

ಭೂಕುಸಿತವನ್ನು ತಾನು ಸಂಸತ್ತಿನಲ್ಲಿ ಪ್ರಸ್ತಾವಿಸುವುದಾಗಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ತಿಳಿಸಿದರು.

ಭೂಕುಸಿತವನ್ನು ಈ ಹಿಂದೆಂದೂ ರಾಜ್ಯದಲ್ಲಿ ಒಂದೇ ಪ್ರದೇಶದಲ್ಲಿ ಸಂಭವಿಸಿರದಿದ್ದ ಭಯಾನಕ ದುರಂತ ಎಂದು ಬಣ್ಣಿಸಿದ ಅವರು,ಈ ಪರಿಸ್ಥಿತಿಯನ್ನು ವಿಭಿನ್ನವಾಗಿ ಪರಿಗಣಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದರು.

ರಾಹುಲ್ ಜಿಲ್ಲಾಡಳಿತ ಮತ್ತು ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ಸಭೆಯಲ್ಲಿ ಸಾವುಗಳ ಸಂಖ್ಯೆ,ಧ್ವಂಸಗೊಂಡ ಮನೆಗಳು ಮತ್ತು ಜನರ ರಕ್ಷಣೆಗಾಗಿ ತಮ್ಮ ಕಾರ್ಯತಂತ್ರಗಳ ಕುರಿತು ಮಾಹಿತಿಗಳನ್ನು ಒದಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News