ನಮ್ಮ ಸರಕಾರ ರಚನೆಯಾದರೆ ಪಶ್ಚಿಮ ಉತ್ತರ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಾಗುವುದು: ಮಾಯಾವತಿ

Update: 2024-04-14 17:17 GMT

ಬಿಎಸ್‌ಪಿ ವರಿಷ್ಠೆ ಮಾಯಾವತಿ

ಮುಝಫ್ಫರ್‌ನಗರ್ (ಉತ್ತರ ಪ್ರದೇಶ): ನಮ್ಮ ಸರಕಾರವೇನಾದರೂ ಕೇಂದ್ರದಲ್ಲಿ ರಚನೆಯಾದರೆ, ಪಶ್ಚಿಮ ಉತ್ತರ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಕಟಿಸಿದರು.

ಇಂದು ಇಲ್ಲಿನ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ಪಿ ವರಿಷ್ಠೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಜಾಟ್ ಹಾಗೂ ಮುಸ್ಲಿಂ ಸಮುದಾಯದ ನಡುವಿನ ಹಗೆತನ ಹೆಚ್ಚಾಯಿತು ಎಂದು ಆರೋಪಿಸಿದರು.

"ನಮ್ಮ ಸರಕಾರವೇನಾದರೂ ಕೇಂದ್ರದಲ್ಲಿ ರಚನೆಯಾದರೆ ಈ ಪ್ರಾಂತ್ಯದ ಜನರ ಅಭಿವೃದ್ಧಿಗಾಗಿ ಪಶ್ಚಿಮ ಉತ್ತರ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಾಗುವುದು. ಇದರೊಂದಿಗೆ ರೈತರು, ಕಾರ್ಮಿಕರು, ನಿರುದ್ಯೋಗಿಗಳು ಹಾಗೂ ಸಣ್ಣ ವರ್ತಕರೆಡೆಗೆ ವಿಶೇಷ ಗಮನ ನೀಡಲಾಗುವುದು. ಬಿಎಸ್‌ಪಿ ಪಕ್ಷವು ರಚನೆಯಾದಾಗ, ವಿರೋಧ ಪಕ್ಷಗಳು ಬಿಎಸ್‌ಪಿಯು ಜಾಟರ ವಿರುದ್ಧ ಎಂಬ ಆರೋಪಗಳನ್ನು ಹರಡಿದವು. ಆದರೆ ನಮ್ಮ ಸರಕಾರವು ರಚನೆಯಾದಾಗ ಪಶ್ಚಿಮ ಉತ್ತರ ಪ್ರದೇಶದಲ್ಲಿ, ವಿಶೇಷವಾಗಿ ಮುಝಫ್ಫರ್‌ನಗರ್‌ನಲ್ಲಿ ಯಾವುದೇ ಗಲಭೆಗಳು ನಡೆಯಲಿಲ್ಲ" ಎಂದು ಮಾಯಾವತಿ ಸ್ಮರಿಸಿದರು.

ಮುಝಫ್ಫರ್‌ನಗರ್‌ನ ಸರಕಾರಿ ಇಂಟರ್ ಕಾಲೇಜಿನಲ್ಲಿ ಮುಝಫ್ಫರ್‌ನಗರ್ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯ ಪರವಾಗಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News