ಸ್ವಾಮಿನಾಥನ್ ರಿಗೆ ಭಾರತ ರತ್ನ ನೀಡಿರುವುದು ಕೇಂದ್ರದ ರೈತ ವಿರೋಧಿ ನಿಲುವನ್ನು ಬಚ್ಚಿಡುವ ಪ್ರಯತ್ನವೆ?: ಶರದ್ ಪವಾರ್ ಗುಂಪಿನ ಪ್ರಶ್ನೆ
ಮುಂಬೈ: ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದು ಕೇಂದ್ರ ಸರಕಾರ ತನ್ನ ರೈತ ವಿರೋಧಿ ನಿಲುವನ್ನು ಬಚ್ಚಿಡುವ ಪ್ರಯತ್ನದ ಭಾಗವಾಗಿದೆ ಎಂದು ಎನ್‌ಸಿಪಿ(ಶರದ್ ಪವಾರ್ ಬಣ) ಆರೋಪಿಸಿದೆ.
ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳ ಪೈಕಿ ಡಾ. ಸ್ವಾಮಿನಾಥನ್ ಅವರ ಸೂತ್ರವನ್ನಾಧರಿಸಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದಾಗಿದ್ದು, ಕೇಂದ್ರ ಸರಕಾರಕ್ಕೆ ಅದನ್ನು ಜಾರಿಗೊಳಿಸುವ ಇರಾದೆಯಿಲ್ಲ ಎಂದು ಶರದ್ ಪವಾರ್ ಬಣದ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರ್ಯಾಸ್ಟೊ ರವಿವಾರ ದೂರಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಸ್ವಾಮಿನಾಥನ್ ಅವರಿಗೆ ನೀಡಿರುವುದು, ಕೇಂದ್ರ ಸರಕಾರದ ರೈತ ವಿರೋಧಿ ನಿಲುವುಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಒಂದು ವೇಳೆ ಬಿಜೆಪಿಗೆ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿರುವ ತನ್ನ ಕ್ರಮದ ಬಗ್ಗೆ ವಿಶ್ವಾಸವಿದ್ದರೆ, ಅದು ಸ್ವಾಮಿನಾಥನ್ ಅವರ ಸೂತ್ರವನ್ನಾಧರಿಸಿರುವ ಕನಿಷ್ಠ ಬೆಂಬಲ ನೀತಿಯನ್ನು ರೈತರ ಕಲ್ಯಾಣಕ್ಕಾಗಿ ಜಾರಿಗೊಳಿಸಬೇಕು ಎಂದು ಕ್ರ್ಯಾಸ್ಟೊ ಆಗ್ರಹಿಸಿದ್ದಾರೆ.