ಮಣಿಪುರ ಅಧಿವೇಶನ: ಹಿಂಸಾಚಾರದ ಕುರಿತು ಯಾವುದೇ ಚರ್ಚೆಯಿಲ್ಲದೆ ಮುಕ್ತಾಯ

Update: 2023-08-29 17:46 GMT

 Photo: PTI  

ಇಂಫಾಲ: ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದಲ್ಲಿ ಮೊದಲ ಅಧಿವೇಶನ ನಡೆದಿದ್ದು, ಅಧಿವೇಶನದ ಮೊದಲ ದಿನದಲ್ಲಿ ರಾಜ್ಯದಲ್ಲಿ ಕಳೆದ 4 ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ವರದಿಯಾಗಿದೆ.

ಆದರೆ ಅಧಿವೇಶನದ ಕೊನೆಯಲ್ಲಿ, "ಸಂವಾದ ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ" ಶಾಂತಿಗೆ ಕರೆ ನೀಡುವ ನಿರ್ಣಯವನ್ನು ಸದನವು ಅಂಗೀಕರಿಸಿದೆ.

ಶಾಸಕಾಂಗದ ಎರಡು ಅಧಿವೇಶನಗಳ ನಡುವಿನ ಅಂತರವು ಆರು ತಿಂಗಳಿಗಿಂತ ಹೆಚ್ಚಿರಬಾರದು ಎಂಬ ಸಾಂವಿಧಾನಿಕ ಅವಶ್ಯಕತೆಗಳನ್ನು ಪೂರೈಸಲು ಆಗಸ್ಟ್ 21 ರಂದು ಸಮನ್ಸ್ ಮೂಲಕ ಒಂದು ದಿನದ ಅಧಿವೇಶನವನ್ನು ತರಾತುರಿಯಲ್ಲಿ ಕರೆಯಲಾಗಿತ್ತು. ಕೊನೆಯ ಅಧಿವೇಶನ ನಡೆದು ಸೆ. 2 ಕ್ಕೆ ಆರು ತಿಂಗಳು ಪೂರ್ತಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತರಾತುರಿಯಾಗಿ ಒಂದು ದಿನದ ಅಧಿವೇಶನ ಕರೆಯಲಾಗಿತ್ತು.

ನಿರೀಕ್ಷೆಯಂತೆ, ಅಧಿವೇಶನಕ್ಕೆ 10 ಕುಕಿ-ಜೋಮಿ ಶಾಸಕರು ಗೈರುಹಾಜರಾಗಿದ್ದಾರೆ. ಭದ್ರತಾ ಕಾರಣಗಳಿಗಾಗಿ ಇಂಫಾಲ್‌ಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಈ ಶಾಸಕರಯ ಮೊದಲೇ ಹೇಳಿದ್ದರು. ಆದರೆ, 10 ನಾಗಾ ಶಾಸಕರು ಸೇರಿದಂತೆ ಉಳಿದ ಶಾಸಕರು ಅಧಿವೇಶನದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News