ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೇ ವಿನಃ ಕುಟುಂಬಸ್ಥರ ಮೇಲೆ ಬುಲ್ಡೋಜರ್ ಪ್ರಯೋಗ ಸಲ್ಲದು: ಮಾಯಾವತಿ

Update: 2024-09-03 10:53 GMT

ಮಾಯಾವತಿ |  PTI 

ಹೊಸದಿಲ್ಲಿ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮನೆಗಳನ್ನು ಕೆಡವುವ ಕುರಿತು ಸುಪ್ರೀಂಕೋರ್ಟ್ ಹೇಳಿಕೆಯನ್ನು ಸ್ವಾಗತಿಸಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ವಿನಃ ಅವರ ಕುಟುಂಬಸ್ಥರ ಮೇಲೆ ಬುಲ್ಡೋಝರ್ ಪ್ರಯೋಗ ಸಲ್ಲದು ಎಂದು ಹೇಳಿದ್ದಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮನೆಗಳನ್ನು ಹಲವು ರಾಜ್ಯಗಳಲ್ಲಿ ಕೆಡವಲಾಗುತ್ತಿದೆ. ಆರೋಪಿಯೆಂಬ ಮಾತ್ರಕ್ಕೆ ಅವರ ಮನೆಯನ್ನು ಕೆಡವುದು ಹೇಗೆ? ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತ್ತು.

ಅಪರಾಧಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರ ಅಪರಾಧಕ್ಕಾಗಿ ಅವರ ಕುಟುಂಬಗಳು ಮತ್ತು ಆತ್ಮೀಯರನ್ನು ಶಿಕ್ಷಿಸಬಾರದು. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವಿದ್ದಾಗ ಕಾನೂನಿನ ಮೂಲಕ ಕಾನೂನು ಅನುಷ್ಠಾನಕ್ಕೆ ತರುವುದನ್ನು ತೋರಿಸಿದೆ ಎಂದು ಮಾಯಾವತಿ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ತೀರ್ಪಿನ ಪ್ರಕಾರ ಬುಲ್ಡೋಜರ್ ಗಳನ್ನು ಬಳಸಬೇಕು. ಆದರೆ, ಅವುಗಳನ್ನು ಬಳಸುವ ಅಗತ್ಯವಿಲ್ಲದಿದ್ದರೆ ಅದು ಉತ್ತಮವಾಗಿರುತ್ತದೆ, ಏಕೆಂದರೆ ಕ್ರಿಮಿನಲ್ ಪ್ರಕರಣಗಳನ್ನು ಕಠಿಣ ಕಾನೂನುಗಳ ಅಡಿಯಲ್ಲಿ ವ್ಯವಹರಿಸಬೇಕು. ಅಪರಾಧಿಗಳ ಕುಟುಂಬ ಹಾಗೂ ಆಪ್ತರ ಮೇಲೆ ಬುಲ್ಡೋಜರ್ ಪ್ರಯೋಗಿಸುವ ಬದಲು ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡದ ಸಂತ್ರಸ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಈ ಬಗ್ಗೆ ಎಲ್ಲಾ ರಾಜ್ಯಗಳ ಸರಕಾರಗಳು ಎಚ್ಚರಿಕೆ ವಹಿಸಬೇಕೆಂದು ಎಂದು ಮಾಯಾವತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News