ಎನ್‌ಐಎಯಿಂದ ದೇಶಾದ್ಯಂತ ದಾಳಿ
ಲಕ್ನೊ: ಮಾನವ ಕಳ್ಳ ಸಾಗಾಟ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ದೇಶಾದ್ಯಂತ ದಾಳಿ ನಡೆಸಿದೆ ಹಾಗೂ ಜಮ್ಮುವಿನಿಂದ ಮ್ಯಾನ್ಮಾರ್‌ನ ವ್ಯಕ್ತಿಯೋರ್ವನನ್ನು ಬಂಧಿಸಿದೆ.
ತ್ರಿಪುರಾ, ಅಸ್ಸಾಂ, ಪಶ್ಚಿಮಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರ್ಯಾಣ, ರಾಜಸ್ಥಾನ, ಪುದುಚೇರಿ, ಜಮ್ಮು ಹಾಗೂ ಕಾಶ್ಮೀರಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ದಾಳಿ ನಡೆಸಿದ ಸಂದರ್ಭ ಮ್ಯಾನ್ಮಾನರ್‌ನ ರೊಹಿಂಗ್ಯಾ ಮುಸ್ಲಿಮರೊಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಮ್ಮುವಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮುವಿನ ಬಟಿಂಡಿಯಲ್ಲಿ ತಾತ್ಕಾಲಿಕ ಮನೆಯಿಂದ ವಾಸಿಸುತ್ತಿದ್ದ ಝಾಫರ್ ಆಲಂ ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ದಾಳಿಗಳನ್ನು ಮ್ಯಾನ್ಮಾರ್ ವಲಸಿಗರು ವಾಸಿಸುವ ಕೊಳಗೇರಿಗಳಿಗೆ ಸೀಮಿತಗೊಳಿಸಲಾಗಿದೆ. ಪಾಸ್‌ಪೋರ್ಟ್ ಕಾಯ್ದೆ ಹಾಗೂ ಮಾನವ ಸಾಗಾಟದ ಪ್ರಕರಣಗಳಿಗೆ ಸಂಬಂಧಿಸಿ ಮಾತ್ರ ದಾಳಿ ನಡೆಸಲಾಗಿದೆ ಎಂದು ಜಮ್ಮುವಿನ ಅಧಿಕಾರಿಗಳು ತಿಳಿಸಿದ್ದಾರೆ